ಶಿವಮೊಗ್ಗ: ಜಿಲ್ಲೆಯ ಸಾಗರದ ಉಳ್ಳೂರು ಬಳಿಯಲ್ಲಿ ಆಟೋ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಉಂಟಾಗಿದೆ. ಈ ಅಪಘಾತದಲ್ಲಿ ಬೈಕ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರಿನ ಸಂಪಿಗೆಸರದ ಬಳಿಯಲ್ಲಿ ಆಟೋ ಹಾಗೂ ಬೈಕ್ ನಡುವೆ ಅಪಘಾತ ಉಂಟಾಗಿದೆ. ಈ ಅಪಘಾತದಲ್ಲಿ ಸಂಪಿಗೆಸರದ ವಿನಯ್ ಎಂಬಾತನ ಕೈ, ಕಾಲು ಮುರಿದು ಗಂಭೀರವಾಗಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಆನಂದಪುರದಿಂದ ಸಾಗರಕ್ಕೆ ಆಟೋ ತೆರಳುತ್ತಿದ್ದರೇ, ಸಾಗರದಿಂದ ಉಳ್ಳೂರಿಗೆ ಬೈಕ್ ನಲ್ಲಿ ವಿನಯ್ ತೆರಳುತ್ತಿದ್ದರು. ಸಂಪಿಗೆಸರದ ಬಳಿಯಲ್ಲಿ ಅಪಘಾತ ಉಂಟಾಗಿದ್ದು, ಬೈಕ್ ಸವಾರ ವಿನಯ್ ಗಂಭೀರವಾಗಿ ಗಾಯಗೊಂಡಿದ್ದರೇ, ಆಟೋದಲ್ಲಿದ್ದಂತ ಮೂವರಿಗೆ ಸಣ್ಣಪುಟ್ಟ ಗಾಯವಾಗಿವೆ. ಗಾಯಾಳುಗಳನ್ನು ಸಾಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಪಘಾತದ ಘಟನೆಯ ನಂತ್ರ 108 ಆ್ಯಂಬುಲೆನ್ಸ್ ಗೆ ಕರೆ ಮಾಡಿದರೂ ಸುಮಾರು ಅರ್ಧ ಗಂಟೆ ಕಾದರು ಸಾಗರದಿಂದ ಕೇವಲ 7 ಕಿಲೋಮೀಟರ್ ದೂರವಿರುವಂತ ಸಂಪಿಗೆಸರಕ್ಕೆ ಬಂದಿಲ್ಲ. ಇದರಿಂದಾಗಿ ರೋಗಿಗಳ ಪ್ರಾಣದ ಜೊತೆಗೆ 108 ಆ್ಯಂಬುಲೆನ್ಸ್ ಅವರು ಆಟ ಆಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವಂತ ಸಾರ್ವಜನಿಕರು, ಇದನ್ನು ಸರಿಪಡಿಸಬೇಕು ಒತ್ತಾಯವನ್ನು ಮಾಡಿದ್ದಾರೆ.
ತುಳು ರಾಜ್ಯದ 2ನೇ ಅಧಿಕೃತ ಭಾಷೆ ಬೇಡಿಕೆ ಬಗ್ಗೆ ಸಂಪುಟದಲ್ಲಿ ಚರ್ಚೆ: ಡಿಸಿಎಂ ಡಿ.ಕೆ.ಶಿವಕುಮಾರ್
SHOCKING : ವಿವಾಹಿತನಿಂದ ನಿರಂತರ ಅತ್ಯಾಚಾರ : ಮಗುವಿಗೆ ಜನ್ಮ ನೀಡಿದ 11 ವರ್ಷದ ಬಾಲಕಿ.!