ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಸ್ವಚ್ಥತಾ ಅಭಿಯಾನವನ್ನು ನಡೆಸಲಾಯಿತು. ಆರೋಗ್ಯ ಇಲಾಖೆ ಹಾಗೂ ದೂಗೂರು ಗ್ರಾಮ ಪಂಚಾಯ್ತಿ ಅಧಿಕಾರಿ, ಸಿಬ್ಬಂದಿಗಳು ಜೊತೆಗೂಡಿ ಆಸ್ಪತ್ರೆ ಆವರಣವನ್ನು ಸ್ವಚ್ಚಗೊಳಿಸಿದರು.
ಇಂದು ಅಕ್ರೋಬರ್.2ರ ಗಾಂಧಿ ಜಯಂತಿಯ ಹಿನ್ನಲೆಯಲ್ಲಿ ದೇಶ, ರಾಜ್ಯದ ವಿವಿಧೆಡೆ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿದೆ. ಇದೇ ವೇಳೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೂಗೂರು ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಜೊತೆಗೂಡಿ ಸ್ವಚ್ಛತಾ ಅಭಿಯಾನ ನಡೆಸಿದರು.
ಈ ಸ್ವಚ್ಛತಾ ಅಭಿಯಾನದಲ್ಲಿ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ವೈದ್ಯಾಧಿಕಾರಿ ಡಾ.ಜಯರಾಂ ಮಹದೇವ್ ಪವಾರ್, ಹಿರಿಯ ಲ್ಯಾಬ್ ಟೆಕ್ನೀಷಿಯನ್ ಚಂದ್ರ ನಾಯ್ಕ್, ಆರೋಗ್ಯ ನಿರೀಕ್ಷಣಾಧಿಕಾರಿ ಶಶಿಧರ್, ಪಿ ಹೆಚ್ ಸಿ ಓ ನಿರ್ಮಲಾ, ಸಿಹೆಚ್ಓ ಉಮಾ ಶರಾವತ್, ಗುರುಕಿರಣ್ ಭಾಗಿಯಾಗಿದ್ದರು.
ದೂಗೂರು ಗ್ರಾಮ ಪಂಚಾಯತಿ ಪಿಡಿಓ ಸಿ.ಕೆ ನಾಗರಾಜ್, ಕಾರ್ಯದರ್ಶಿ ನಂದಿನಿ, ಉಪಾಧ್ಯಕ್ಷರಾದ ಗಂಗಮ್ಮ, ಸದಸ್ಯರಾದ ಪುಟ್ಟಪ್ಪ, ನಟರಾಜ್, ತುಳಸಿ, ಶಶಿಕಲಾ, ಸಿಬ್ಬಂದಿಗಳಾದ ನಾರಾಯಣಪ್ಪ, ಪ್ರದೀಪ್, ಉಮೇಶ್, ಲೋಕೇಶ್, ಅಣ್ಣಪ್ಪ, ಪುನೀತ್, ಇಂದ್ರಮ್ಮ ಜೊತೆಗೆ ಇದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
2050ರ ವೇಳೆಗೆ ಮೂರು ಜಾಗತಿಕ ‘ಸೂಪರ್ ಪವರ್’ ದೇಶಗಳಲ್ಲಿ ಭಾರತವೂ ಒಂದು: ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್
BIG NEWS : ಕರ್ನಾಟಕದಲ್ಲಿ `ಮದ್ಯ’ ದರ ದೇಶದಲ್ಲೇ ದುಬಾರಿ….! ಇದಕ್ಕೆ ಕಾರಣವೇನು ಗೊತ್ತಾ?