Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಜಾತ್ರೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಕೇಸ್: ರಮೇಶ್ ಜಾರಕಿಹೊಳಿ ಪುತ್ರನ ವಿರುದ್ಧ `FIR’ ದಾಖಲು.!

06/07/2025 6:52 AM

ಗಡಿಯಾಚೆಗಿನ ಮಂಪರು ಭಯೋತ್ಪಾದನೆ ಪ್ರಕರಣ: ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೇರಿ 10 ಮಂದಿ ವಿರುದ್ಧ ಚಾರ್ಜ್ ಶೀಟ್

06/07/2025 6:50 AM
vidhana soudha

BIG NEWS : ಗ್ರಾಮಪಂಚಾಯಿತಿ ಬಿ-ಖಾತಾ ಆಸ್ತಿಗೆ ಏಕರೂಪ ತೆರಿಗೆ : ರಾಜ್ಯ ಸರ್ಕಾರದಿಂದ ಕರಡು ನಿಯಮ ಪ್ರಕಟ.!

06/07/2025 6:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: 12ನೇ ಶತಮಾನದ ಕ್ರಾಂತಿಕಾರಿ ವಚನಕಾರ ಹಡಪದ ಅಪ್ಪಣ್ಣ: ಹೆಚ್.ಎಸ್ ಸುಂದರೇಶ್
KARNATAKA

ಶಿವಮೊಗ್ಗ: 12ನೇ ಶತಮಾನದ ಕ್ರಾಂತಿಕಾರಿ ವಚನಕಾರ ಹಡಪದ ಅಪ್ಪಣ್ಣ: ಹೆಚ್.ಎಸ್ ಸುಂದರೇಶ್

By kannadanewsnow0921/07/2024 6:23 PM

ಶಿವಮೊಗ್ಗ: ಸಮಾಜದಲ್ಲಿನ ಶೋಷಿತ ವರ್ಗಗಳ ಬೆಳವಣಿಗೆಗೆ ವಚನಗಳ ಮೂಲಕ ಕ್ರಾಂತಿಕಾರಿ ಹೋರಾಟ ನಡೆಸಿದ ಶಿವಶರಣರು ಮತ್ತು 12 ನೇ ಶತಮಾನದಲ್ಲಿ ಅನುಭವ ಮಂಟಪದ ಕಾರ್ಯದರ್ಶಿಯಾಗಿದ್ದ ಶ್ರೇಷ್ಠ ವಚನಕಾರ ಹಡಪದ ಅಪ್ಪಣ್ಣ ಎಂದು ಶಿವಮೊಗ್ಗ, ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಹೆಚ್.ಎಸ್. ಸುಂದರೇಶ್ ರವರು ಹೇಳಿದರು.

ನಗರದ ಕುವೆಂಪು ರಮಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಹಾಗೂ ಶಿವಮೊಗ್ಗ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು ಕಾಯಕ ಮಾಡುವ ಹಡಪದ ಅಪ್ಪಣ ಅನುಭವ ಮಂಟಪದಲ್ಲಿ ಕಾರ್ಯದರ್ಶಿಯಾಗಿದ್ದರು.

12 ನೇ ಶತಮಾನದಲ್ಲಿ ಬಸವಣ್ಣನ ಅನುಯಾಯಿಯಾಗಿ ಸಮಾಜದ ಕ್ರಾಂತಿಕಾರಿ ಮತ್ತು ವಚನದ ಕ್ರಾಂತಿಕಾರಿ ಶರಣರಾಗಿ ಬೆಳೆದವರು. ಸಮಾಜದಲ್ಲಿನ ಶೋಷಣೆಯನ್ನು ಹೋಗಲಾಡಿಸಲು ಹಲವಾರು ಜನರು ಶ್ರಮಿಸಿದ್ದಾರೆ, ಅದರಲ್ಲಿ ಹಡಪದ ಅಪ್ಪಣ್ಣನವರು ಕೂಡ ಒಬ್ಬರು. ಸಮಾಜದಲ್ಲಿ ಒಡೆದು ಆಳುವ ನೀತಿಯನ್ನು ಹೋಗ ಲಾಡಿಸಲು ಬಸವಣ್ಣನವರ ಜೊತೆಗೆ ಹೋರಾಟ ನಡೆಸಿದ ವ್ಯಕ್ತಿ ಇವರು. ಇವರು 250ಕ್ಕೂ ಹೆಚ್ಚು ವಚನಗಳನ್ನು ಸಮಾಜದಲ್ಲಿನ ತಾರತಮ್ಯ ಭಾವನೆ ಇರಬಾರದು ಎಂಬ ಅರ್ಥದಲ್ಲಿ ರಚನೆ ಮಾಡಿದ್ದಾರೆ. ಬಡ ಕುಟುಂಬದಿಂದ ಸಮಾಜದ ಮುಖ್ಯ ವಾಹಿನಿಗೆ ಬಂದು ಸಮಾನತೆಯ ಬಗ್ಗೆ ಅರಿವು ಮೂಡಿಸಿದ ವಚನಕಾರ ಇವರು.ಹಡಪದ ಸಮಾಜದವರಯ ಇವರನ್ನು ಮಾದರಿಯಾಗಿಟ್ಟುಕೊಂಡುಮುಂದೆ ಬರಬೇಕು ಎಂದು ಹೇಳಿದರು.

ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ಹೆಚ್ ಮಾತನಾಡಿ ಹಡಪದ ಸಮುದಾಯದಲ್ಲಿ ಹುಟ್ಟಿದ ಅಪ್ಪಣ್ಣ ಅವರಿಗೆ ಬಸವಣ್ಣ ಉತ್ತಮ ಹುದ್ದೆ ನೀಡಿದರು. 12 ನೇ ಶತಮಾನದಲ್ಲಿ ಚಂಪೂ, ರಗಳೆ ಕಾವ್ಯಗಳು ಸಾಮಾನ್ಯ ಜನರಿಗೆ ಅರ್ಥೈಸಿಕೊಳ್ಳಲು ಕಷ್ಟಕರವಾಗುತ್ತಿತ್ತು. ಅದಕ್ಕಾಗಿ ಬಸವಣ್ಣನವರು ವಚನಗಳ ಮೂಲಕ ಸಾಮಾನ್ಯರಿಗೆ ಅರ್ಥೈಸಿದರು. ದಾರಿ ತೋರಿದರು. ಹಡಪದ ಅಪ್ಪಣ್ಣ ಬಂದ ನಂತರ ಸಮಾಜದಲ್ಲಿ ಕ್ರಾಂತಿಕಾರಿಯಾಗಿ ಗುರುತಿಸಿಕೊಂಡರು. ಮಹಾನ್ ವ್ಯಕ್ತಿಗಳ ವಚನದಿಂದ ಜಾತಿ ನಿಂದನೆ, ಅನೇಕ ಕಟ್ಟುಪಾಡುಗಳು ಸಾಮಾನ್ಯರಿಗೆ ಅರ್ಥವಾಯಿತು. ಅವರ ಮಡದಿ ಲಿಂಗಮ್ಮ ವಚನಗಾರ್ತಿ ಆಗಿರುವುದು ಹೆಮ್ಮೆಯ ವಿಷಯ. ಇವರ ಸಾಹಿತ್ಯಗಳನ್ನು ನಿಮ್ಮ ಮನೆಯಲ್ಲಿ ಮತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅದು ಸಾರ್ಥಕ ಜೀವನವಾಗುತ್ತದೆ. ಹಾಗೂ ಅದು ಅವರಿಗೆ ಗೌರವನ್ನು ನೀಡುವ ಅಂಶವಾಗಿದೆ ಎಂದು ಹೇಳಿದರು.

ವಿಧಾನಸಭಾ ಶಾಸಕರಾದ ಶಾರದಾ ಪೂರ್ಯಾನಾಯ್ಕ್ ಮಾತನಾಡಿ ಬಸವಣ್ಣ ಮತ್ತು ಅಂಬೇಡ್ಕರ್ ಒಂದು ಭಾವನೆ. ಅವರು ಸಮಾಜದ ಕ್ರಾಂತಿಕಾರರು . ಬಸವಣ್ಣನವರು ಹಡಪದ ಅಪ್ಪಣನವರನ್ನು ತುಂಬಾ ನಂಬಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದರು. ಅಪ್ಪಣ್ಣನವರು ನಿಷ್ಟೆ ಯಿಂದ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದರು ಎಂದು ಸ್ಮರಿಸಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ. ಎಸ್ ಚಂದ್ರ ಭೂಪಾಲ್ ಮಾತನಾಡಿ, 12ನೇ ಶತಮಾನದಲ್ಲಿ ಕಾಯಕ ನಿಷ್ಠೆ ಮತ್ತು ನೇರ ನುಡಿಯಿಂದ ಬಸವಣ್ಣನವರ ಜೊತೆಗೆ ಗುರುತಿಸಿ ಕೊಂಡ ಶರಣರು ಅಪ್ಪಣ್ಣ. ಬಸವಣ್ಣನವರ ಆಪ್ತ ಸಹಾಯಕರಾಗಿ, ಅನುಭವ ಮಂಟಪದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು. ಸಮಾಜದ ಅಂಕುಡೊಂಕು, ನಿರುದ್ಯೋಗದ ಬಗ್ಗೆ ತಮ್ಮ ವಚನದಲ್ಲಿ ಅರಿವು ಮೂಡಿಸಿದವರು. ಅವರ ವಚನಗಳಲ್ಲಿನ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣ ಸಂಘದ ಜಿಲ್ಲಾ ಮಟ್ಟದ ಅಧ್ಯಕ್ಷರಾದ ಮಲ್ಲೇಶಪ್ಪ,ಹಡಪದ ಅಪ್ಪಣ್ಣ ಸಂಘದ ತಾಲೂಕು ಅಧ್ಯಕ್ಷರಾದ ಎಚ್.ಎಸ್ ವೀರಭದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್. ಹೆಚ್, ಪ್ರಿಯ ದರ್ಶಿನಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ ವೀರೇಶ್ ಮತ್ತು ಸಮಾಜದವರು ಭಾಗವಹಿಸಿದ್ದರು.

ಶಿರೂರು ಬಳಿ ಭೂಕುಸಿತ: ಮಣ್ಣು ತೆರವು ಮತ್ತು ಶೋಧ ಕಾರ್ಯಾಚರಣೆಗೆ ಮಿಲಿಟರಿ ಹಾಗೂ ನೌಕಾಪಡೆ- ಸಿಎಂ ಸಿದ್ಧರಾಮಯ್ಯ

Schoking News: ‘ಐಪೋನ್’ಗಾಗಿ 8 ವರ್ಷದ ಸೋದರ ಸಂಬಂಧಿಯನ್ನೇ ಉಸಿರುಗಟ್ಟಿಸಿ ಕೊಂದ ’12ರ ಬಾಲಕಿ’

Share. Facebook Twitter LinkedIn WhatsApp Email

Related Posts

BREAKING : ಜಾತ್ರೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಕೇಸ್: ರಮೇಶ್ ಜಾರಕಿಹೊಳಿ ಪುತ್ರನ ವಿರುದ್ಧ `FIR’ ದಾಖಲು.!

06/07/2025 6:52 AM1 Min Read
vidhana soudha

BIG NEWS : ಗ್ರಾಮಪಂಚಾಯಿತಿ ಬಿ-ಖಾತಾ ಆಸ್ತಿಗೆ ಏಕರೂಪ ತೆರಿಗೆ : ರಾಜ್ಯ ಸರ್ಕಾರದಿಂದ ಕರಡು ನಿಯಮ ಪ್ರಕಟ.!

06/07/2025 6:47 AM1 Min Read

BIG NEWS : ದೇಶದ 2 ನೇ ಅತಿ ಉದ್ದದ ‘ಸಿಗಂದೂರು ಕೇಬಲ್ ಸೇತುವೆ’ ಉದ್ಘಾಟನೆಗೆ ಮುಹೂರ್ತ ಫಿಕ್ಸ್.!

06/07/2025 6:37 AM1 Min Read
Recent News

BREAKING : ಜಾತ್ರೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಕೇಸ್: ರಮೇಶ್ ಜಾರಕಿಹೊಳಿ ಪುತ್ರನ ವಿರುದ್ಧ `FIR’ ದಾಖಲು.!

06/07/2025 6:52 AM

ಗಡಿಯಾಚೆಗಿನ ಮಂಪರು ಭಯೋತ್ಪಾದನೆ ಪ್ರಕರಣ: ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೇರಿ 10 ಮಂದಿ ವಿರುದ್ಧ ಚಾರ್ಜ್ ಶೀಟ್

06/07/2025 6:50 AM
vidhana soudha

BIG NEWS : ಗ್ರಾಮಪಂಚಾಯಿತಿ ಬಿ-ಖಾತಾ ಆಸ್ತಿಗೆ ಏಕರೂಪ ತೆರಿಗೆ : ರಾಜ್ಯ ಸರ್ಕಾರದಿಂದ ಕರಡು ನಿಯಮ ಪ್ರಕಟ.!

06/07/2025 6:47 AM

BREAKING: ಅಮೇರಿಕಾದಲ್ಲಿ ಹೊಸ ರಾಜಕೀಯ ಪಕ್ಷ ಘೋಷಿಸಿದ ಎಲೋನ್ ಮಸ್ಕ್ | Elon Musk

06/07/2025 6:45 AM
State News
KARNATAKA

BREAKING : ಜಾತ್ರೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಕೇಸ್: ರಮೇಶ್ ಜಾರಕಿಹೊಳಿ ಪುತ್ರನ ವಿರುದ್ಧ `FIR’ ದಾಖಲು.!

By kannadanewsnow5706/07/2025 6:52 AM KARNATAKA 1 Min Read

ಬೆಳಗಾವಿ: ಜಿಲ್ಲೆಯಲ್ಲಿ ಜಾತ್ರೆಯೊಂದರಲ್ಲಿ ಪಾಲ್ಗೊಂಡಿದ್ದಂತ ರಮೇಶ್ ಜಾರಕಿಹೊಳಿ ಪುತ್ರ ಗುಂಡು ಹಾರಿಸಿ ಪುಂಡಾಟ ಮೆರೆದಿದ್ದನು. ಈ ಘಟನೆ ಸಂಬಂಧ ಇದೀಗ…

vidhana soudha

BIG NEWS : ಗ್ರಾಮಪಂಚಾಯಿತಿ ಬಿ-ಖಾತಾ ಆಸ್ತಿಗೆ ಏಕರೂಪ ತೆರಿಗೆ : ರಾಜ್ಯ ಸರ್ಕಾರದಿಂದ ಕರಡು ನಿಯಮ ಪ್ರಕಟ.!

06/07/2025 6:47 AM

BIG NEWS : ದೇಶದ 2 ನೇ ಅತಿ ಉದ್ದದ ‘ಸಿಗಂದೂರು ಕೇಬಲ್ ಸೇತುವೆ’ ಉದ್ಘಾಟನೆಗೆ ಮುಹೂರ್ತ ಫಿಕ್ಸ್.!

06/07/2025 6:37 AM

GOOD NEWS : ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್ : `ಕಿರು ಆಹಾರ ಸಂಸ್ಕರಣಾ ಉದ್ದಿಮೆ ಸ್ಥಾಪನೆಗೆ 15 ಲಕ್ಷ ರೂ.ವರೆಗೆ ಸಹಾಯಧನ.!

06/07/2025 6:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.