ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರುಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿಗೆ ನಾಪತ್ತೆಯಾದವರನ್ನು ಹುಡುಕಲು ಕಾರ್ಯಚರಣೆ ಆರಂಭಗೊಂಡು 8 ದಿನಗಳಾಯ್ತು. ಇದೀಗ ಈ ಕುರಿತು ಸಚಿವ ಕೃಷ್ಣ ಭೈರೇಗೌಡ ಅವರು ಟ್ವೀಟ್ ಮಾಡಿದ್ದು ನದಿಯಲ್ಲಿ ಲಾರಿ ಇರುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ.
ಟ್ವೀಟ್ ನಲ್ಲಿ ನದಿ ನೀರಿನಲ್ಲಿ ಖಚಿತವಾಗಿ ಒಂದು ಟ್ರಕ್ ಇದೆ. ನೌಕಾಪಡೆಯ ಡಿವೈರಗಳು ಸ್ಥಳದಲ್ಲೇ ಲಂಗರು ಹಾಕಲಿದ್ದಾರೆ. ನದಿಯ ಅಡಿಯಲ್ಲಿರೋ ಹೂಳೆತ್ತಳು ಯಂತ್ರ ಬಳಸಲಾಗುವುದು. ಅಲ್ಲದೆ ಮೆಟಲ್ ಡಿಟೆಕ್ಟ್ ಗಳ ಮೂಲಕ ಮೃತದೇಹ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೆಲಿಕ್ಯಾಪ್ಟರ್ ಗಳ ಮೂಲಕ ಮೃತದೇಹಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಎಂದು ಕಾರ್ಯಾಚರಣೆ ಬಗ್ಗೆ ಸಚಿವ ಕೃಷ್ಣಭೈರೇಗೌಡ ಇದೀಗ ಟ್ವೀಟ್ ಮಾಡಿದ್ದಾರೆ.
ಕಳೆದ ಎಂಟು ದಿನಗಳ ಹಿಂದೆ ಭಾರಿ ಮಳೆಯಿಂದಾಗಿ ಉತ್ತರ ಕನ್ನಡ ಗೆಳೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿದು ಹತ್ತುಕೂ ಹೆಚ್ಚು ಜನರು ನಾಪತ್ತೆಯಾಗಿದ್ದರು ಇದೀಗ ನಿನ್ನಯವರೆಗೂ ಎಂಟು ಜನರ ಇರುತ್ತದೆ ಇನ್ನು ಹಲವಾರು ಮಣ್ಣಿನ ಅಡಿಯಲ್ಲಿ ಸಿಲುಕಿರಬಹುದು ಎಂದು ಶಂಕಿಸಿ ಇದೀಗ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಲ್ಲದೆ ಕೇರಳದ ಲಾರಿ ಚಾಲಕ ಅರ್ಜುನಗಾಗಿ ಇದೀಗ ಶೋಧ ಕಾರ್ಯ ಮುಂದುವರೆದಿದೆ.
Update on operation at Shiroor landslide.
One truck has been definitively located in the water and that the naval deep divers will attempt anchoring shortly.
The long arm boomer excavator will be used to dredge the river.
Advanced drone based Intelligent Underground Buried…— Krishna Byre Gowda (@krishnabgowda) July 24, 2024