ಶಿವಮೊಗ್ಗ : ಮಕ್ಕಳಾಗಿಲ್ಲವೆಂದು ಪತಿ ಹಾಗೂ ಆತನ ಮನೆಯ ಕಡೆಯವರು ಕಿರುಕುಳ ನೀಡಿದ್ದರಿಂದ ಮನನೊಂದು ಮಹಿಳೆ ಒಬ್ಬರು ಆ ನೇಣು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಗಾಡಿಕೊಪ್ಪದಲ್ಲಿ ನಡೆದಿದೆ.
TCS Jobs : ‘TCS’ನಲ್ಲಿ ಹೊಸಬರ ನೇಮಕಾತಿ ಪ್ರಾರಂಭ ; 3.5 ಲಕ್ಷ ಉದ್ಯೋಗಿಗಳಿಗೆ ‘AI’ ತರಬೇತಿ
ಶಿವಮೊಗ್ಗದ ಗಾಡಿಕೊಪ್ಪದ ಮನೆಯಲ್ಲಿ ಅಶ್ವಿನಿ (31)ನೇಣಿಗೆ ಶರಣಾದ ಮಹಿಳೆ ಎಂದು ಹೇಳಲಾಗುತ್ತಿದ್ದು, ಮದುವೆಯಾಗಿ 5 ವರ್ಷ ಕಳೆದರೂ ಮಕ್ಕಳಾಗಿಲ್ಲ ಎಂದು ಪತಿ ಅಭಿಷೇಕ್ ಹಾಗೂ ಮನೆಯವರಿಂದ ಕಿರುಕುಳ ಆರೋಪ ಕೇಳಿಬಂದಿದೆ. ಹೀಗಾಗಿ ಘಟನೆ ಕುರಿತಂತೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.