Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾರಿನ ಒಳಗಿನ ಕೆಟ್ಟ ವಾಸನೆಯಿಂದ ಮುಕ್ತಿ ಬೇಕೇ? ಈ 5 ಸುಲಭ ಉಪಾಯಗಳನ್ನು ಅನುಸರಿಸಿ!

02/05/2026 8:27 PM

BREAKING: ಗುಜರಾತ್ ಕಚ್‌ನಲ್ಲಿ ಐಸಿಸ್ ಉಗ್ರ ಜಾಲ ಪತ್ತೆ; ಜಿಹಾದ್ ಪ್ರಚಾರ ಮಾಡುತ್ತಿದ್ದ ಶಂಕಿತ ಭಯೋತ್ಪಾದಕ ಅರೆಸ್ಟ್!

02/05/2026 8:15 PM

ಹಿಮಂತ ಬಿಸ್ವಾ ಶರ್ಮಾ ಭಾಷಣಕ್ಕೆ ಬಾಂಗ್ಲಾದೇಶ ಆಕ್ಷೇಪ: ಭಾರತದ ರಾಯಭಾರಿಗೆ ಸಮನ್ಸ್!

02/05/2026 8:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 2 ಲಕ್ಷ ಎಕರೆ ಅರಣ್ಯ ಒತ್ತುವರಿ: ಶಿವಮೊಗ್ಗ, ಉತ್ತರ ಕನ್ನಡದಲ್ಲೇ ಹೆಚ್ಚು – ಸಚಿವ ಈಶ್ವರ್ ಖಂಡ್ರೆ
KARNATAKA

2 ಲಕ್ಷ ಎಕರೆ ಅರಣ್ಯ ಒತ್ತುವರಿ: ಶಿವಮೊಗ್ಗ, ಉತ್ತರ ಕನ್ನಡದಲ್ಲೇ ಹೆಚ್ಚು – ಸಚಿವ ಈಶ್ವರ್ ಖಂಡ್ರೆ

By kannadanewsnow0902/01/2024 7:29 PM

ಬೆಂಗಳೂರು : ರಾಜ್ಯದಲ್ಲಿ ಸುಮಾರು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ದೊಡ್ಡ ಪ್ರಮಾಣದ ಒತ್ತುವರಿಯನ್ನು ಮೊದಲಿಗೆ ತೆರವುಗೊಳಿಸುವಂತೆ ಇಲಾಖೆಯ ಉನ್ನತಾಧಿಕಾರಿಗಳಿಗೆ ಸೂಚಿಸಿರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಅರಣ್ಯ ಮತ್ತು ಪರಿಸರ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕಾಯಿದೆ ರಚಿಸಿದ್ದಾಗ್ಯೂ, ಸುಮಾರು 2 ಲಕ್ಷ ಎಕರೆ ಅರಣ್ಯಭೂಮಿ ಒತ್ತುವರಿ ಆಗಿರುವುದು ಆಘಾತಕಾರಿ ವಿಷಯ ಎಂದರು.

ದೊಡ್ಡ ಒತ್ತುವರಿ ತೆರವಿಗೆ ಸೂಚನೆ

ಯಾರೇ ಅರಣ್ಯ ಭೂಮಿ ಒತ್ತುವರಿ ಮಾಡಿದರೂ ಅದು ಅಪರಾಧ. ಬೆಂಗಳೂರು ನಗರದ ಸುತ್ತಮುತ್ತ ಮತ್ತು ಪಟ್ಟಣ, ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಬೆಲೆಬಾಳುವ ಅರಣ್ಯ ಭೂಮಿಯ ಒತ್ತುವರಿ ತೆರವಿಗೆ ಮೊದಲ ಆದ್ಯತೆ ನೀಡುವುದು ಅಗತ್ಯವಿದೆ ಎಂದು ಹೇಳಿದರು.

ಈಗಾಗಲೇ ಕೊತ್ತನೂರಿನಲ್ಲಿ 400ಕೋಟಿ ರೂ. ಬೆಲೆ ಬಾಳುವ ಅರಣ್ಯ ಭೂಮಿಯನ್ನು ರಕ್ಷಿಸಲಾಗಿದ್ದು, ಇದನ್ನು ಕಂದಾಯ ಭೂಮಿ ಎಂದು ಪರಿವರ್ತಿಸಿದ್ದ ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದೂ ತಿಳಿಸಿದರು.

ಮಾನವ -ವನ್ಯಜೀವಿ ಸಂಘರ್ಷ: ಅರಣ್ಯದಲ್ಲಿ ವನ್ಯ ಮೃಗಗಳ ಸಂಖ್ಯೆ ಹೆಚ್ಚಳವಾಗುತ್ತಿದೆ, ಆದರೆ ಅದಕ್ಕೆ ಅನುಗುಣವಾಗಿ ವನ ಪ್ರದೇಶ ಹೆಚ್ಚಾಗುತ್ತಿಲ್ಲ. ಹೀಗಾಗಿ ಮಾನವ ಮತ್ತು ವನ್ಯ ಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯ ಒತ್ತುವರಿ ತೆರವು ಅತ್ಯಗತ್ಯ ಕ್ರಮವಾಗಿದೆ, ತಾವು ಸಚಿವರಾದ ಬಳಿಕ 2 ಸಾವಿರ ಎಕರೆಗೂ ಹೆಚ್ಚು ಅರಣ್ಯ ಒತ್ತುವರಿ ತೆರವು ಮಾಡಲಾಗಿದೆ ಎಂದು ತಿಳಿಸಿದರು.

ಕಾಡಿನಂಚಿನಲ್ಲಿರುವ ಹಲವು ದಶಕಗಳ ಬೆಲೆಬಾಳುವ ವೃಕ್ಷಗಳನ್ನು ಕಡಿದು ಪಟ್ಟಾಭೂಮಿ ವಿಸ್ತರಣೆ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ ಈ ಬಗ್ಗೆ ಅರಣ್ಯದಂಚಿನ ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ಅರಣ್ಯ ಸಂರಕ್ಷಣಾ ಕಾಯಿದೆ 1980ರ ಜಾರಿಗೂ ಮುನ್ನ ಅರಣ್ಯ ಭೂಮಿ ಒತ್ತುವರಿ ಮಾಡಿ ನಿಗದಿತ ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಿರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕಿದೆ. ಸುಮಾರು 13,155 ಪ್ರಕರಣಗಳ 31,864 ಎಕರೆ ಭೂಮಿ ಇದ್ದು, ಈ ಪೈಕಿ ಸುಮಾರು 7 ಸಾವಿರ ಪ್ರಕರಣಗಳಲ್ಲಿ ಪಟ್ಟಾ ಕೊಡಲು ಕ್ರಮವಹಿಸಬಹುದಾಗಿದೆ. ಈ ಸಂಬಂಧ ಬಾಕಿ ಇರುವ ಪ್ರಕರಣಗಳನ್ನು ಆದಷ್ಟು ಶೀಘ್ರ ವಿಲೇವಾರಿ ಮಾಡುವಂತೆ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

1980ಕ್ಕೆ ಮುನ್ನ 3 ಎಕರೆಗಿಂತ ಕಡಿಮೆ ಭೂಮಿ ಒತ್ತುವರಿ ಮಾಡಿ ಮನೆ ಕಟ್ಟಿರುವ ಮತ್ತು ಉಳಿಮೆ ಮಾಡುತ್ತಿರುವ ಬಡ ರೈತರಿಗೆ ಕಿರುಕುಳ ನೀಡದೆ, ದೊಡ್ಡ ಒತ್ತುವರಿಗಳನ್ನು ಮೊದಲು ತೆರವು ಮಾಡಿಸಲು ಕ್ರಮ ವಹಿಸುವಂತೆಯೂ ಆದೇಶಿಸಿರುವುದಾಗಿ ಹೇಳಿದರು. ಅರಣ್ಯ ಒತ್ತುವರಿ ಕುರಿತಂತೆ ವಲಯವಾರು, ವಿಭಾಗವಾರು, ವೃತ್ತವಾರು ಮಾಹಿತಿ ಕೈಸೇರಿದ ಬಳಿಕ ಕ್ರಮ ವಹಿಸುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.

ವನ್ಯಮೃಗ ಅಂಗಾಂಗದ ವಸ್ತು ಹಿಂತಿರುಗಿಸಲು ಗಡುವು:ಹುಲಿ ಉಗುರು, ಆನೆ ಬಾಲದ ಆಭರಣ, ವಿವಿಧ ಕಾಡುಮೃಗಗಳ ಕೊಂಬು, ಮುಖದ ಟ್ರೋಫಿಗಳು ಇತ್ಯಾದಿಯನ್ನು ನೋಂದಣಿ ಮಾಡಿಸಿ ಇಟ್ಟುಕೊಳ್ಳಲು ನೀಡಲಾಗಿದ್ದ ಗಡುವು ಹಲವು ದಶಕಗಳ ಹಿಂದೆಯೇ ಮುಗಿದಿದ್ದು, ಈಗ ಅಂತಹ ವಸ್ತುಗಳನ್ನು ಸರ್ಕಾರಕ್ಕೆ ಮರಳಿಸಲು ಮಾತ್ರ ಅವಕಾಶ ನೀಡಬಹುದಾಗಿದೆ ಎಂಬ ಅಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ ಕಾನೂನು ಇಲಾಖೆಯೊಂದಿಗೆ ಸಮಾಲೋಚನೆ ನಡೆದಿದ್ದು, ಈ ತಿಂಗಳಲ್ಲೇ ಸಚಿವ ಸಂಪುಟದಲ್ಲಿ ಮಂಡಿಸಿ ಒಂದು ಬಾರಿ ಮಾತ್ರ 3 ತಿಂಗಳುಗಳ ಕಾಲಾವಕಾಶ ನೀಡಲಾಗುವುದು ಎಂದರು.

ಹಲವು ಮುಗ್ದ ಜನರಿಗೆ ಕಾನೂನಿನ ಅರಿವಿಲ್ಲ, ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕದಂತೆ ಈ ಪರಿಹಾರೋಪಾಯ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಕಾನೂನು ರೀತಿಯಲ್ಲೇ ಕ್ರಮ: ಹಾಸನ ಜಿಲ್ಲೆ ಬೇಲೂರು ತಾಲೂಕು ನಂದಗೊಂಡನ ಹಳ್ಳಿಯಲ್ಲಿ 126 ಬೃಹತ್ ಮರಗಳನ್ನು ಕಡಿದಿರುವುದನ್ನು ನೋಡಿ ನಾಡಿನ ಜನರೇ ಸಂಕಟಪಟ್ಟಿದ್ದಾರೆ. ಇಲ್ಲಿ ಯಾರ ಮೇಲೋ ಆರೋಪ ಮಾಡುವ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ. ಮರ ಅಕ್ರಮ ಕಡಿತಲೆ ಆಗಿರುವ ಜಮೀನಿನಲ್ಲಿ ಶುಂಠಿ ಬೆಳೆಯಲು ಕರಾರು ಮಾಡಿಕೊಂಡಿರುವ ವ್ಯಕ್ತಿಯನ್ನು ವಶಕ್ತೆ ಪಡೆಯಲಾಗಿತ್ತು ಎಂದರು. ಬೃಹತ್ ಮರ ಇರುವ ಕಡೆ ಶುಂಠಿ ಬೆಳೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯವಹಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.

BREAKING: ನನ್ನನ್ನು ಸಾಯಿಸಲು ಹೊಂಚು ಹಾಕಿಸ್ತಿದ್ದಾರೆ – ವಿದ್ಯಾಧರನಾಥಶ್ರೀ ಗಂಭೀರ ಆರೋಪ

BIG NEWS: ರಾಮಜನ್ಮಭೂಮಿ ಹೋರಾಟಗಾರ ‘ಶ್ರೀಕಾಂತ್ ಪೂಜಾರಿ’ ಬಂಧನ ಪ್ರಕರಣ: ಬರೋಬ್ಬರಿ 15 ಕೇಸ್ ದಾಖಲು

Share. Facebook Twitter LinkedIn WhatsApp Email

Related Posts

ಸ್ಥಳೀಯರಿಗೆ ಹೆಚ್ಚು ಉದ್ಯೋಗ ಕಲ್ಪಿಸಿ: ಕೈಗಾರಿಕೋದ್ಯಮಿಗಳಲ್ಲಿ ಮದ್ದೂರು ಶಾಸಕ ಕೆ.ಎಂ.ಉದಯ್ ಮನವಿ

02/05/2026 7:54 PM2 Mins Read

BIG NEWS: ಮೇ.20ರಿಂದ ರಾಜ್ಯದಲ್ಲಿ ಸಾರಿಗೆ ಸಮರ: ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನೌಕರರ ನಿರ್ಧಾರ

02/05/2026 7:49 PM1 Min Read

BREAKING: ರಾಜ್ಯದಲ್ಲಿ ಹಕ್ಕಿಜ್ವರದ ಭೀತಿ: ತುಮಕೂರಲ್ಲಿ ನವಿಲು H5N1 ನಿಂದ ಸಾವು ದೃಢ, ಕಟ್ಟೆಚ್ಚರಕ್ಕೆ ಸಚಿವ ಈಶ್ವರ್ ಖಂಡ್ರೆ ಸೂಚನೆ

02/05/2026 7:29 PM1 Min Read
Recent News

ಕಾರಿನ ಒಳಗಿನ ಕೆಟ್ಟ ವಾಸನೆಯಿಂದ ಮುಕ್ತಿ ಬೇಕೇ? ಈ 5 ಸುಲಭ ಉಪಾಯಗಳನ್ನು ಅನುಸರಿಸಿ!

02/05/2026 8:27 PM

BREAKING: ಗುಜರಾತ್ ಕಚ್‌ನಲ್ಲಿ ಐಸಿಸ್ ಉಗ್ರ ಜಾಲ ಪತ್ತೆ; ಜಿಹಾದ್ ಪ್ರಚಾರ ಮಾಡುತ್ತಿದ್ದ ಶಂಕಿತ ಭಯೋತ್ಪಾದಕ ಅರೆಸ್ಟ್!

02/05/2026 8:15 PM

ಹಿಮಂತ ಬಿಸ್ವಾ ಶರ್ಮಾ ಭಾಷಣಕ್ಕೆ ಬಾಂಗ್ಲಾದೇಶ ಆಕ್ಷೇಪ: ಭಾರತದ ರಾಯಭಾರಿಗೆ ಸಮನ್ಸ್!

02/05/2026 8:09 PM

ರಸ್ತೆ ಮೇಲಿನ ‘ಜೀಬ್ರಾ ಕ್ರಾಸಿಂಗ್’ ಕಪ್ಪು-ಬಿಳಿ ಬಣ್ಣದಲ್ಲೇ ಇರುವುದೇಕೆ? ಹಳದಿ ಬಣ್ಣವನ್ನೇಕೆ ಬಳಸಲ್ಲ? ಇಲ್ಲಿದೆ ಅದರ ಹಿಂದಿನ ವೈಜ್ಞಾನಿಕ ರಹಸ್ಯ!

02/05/2026 7:57 PM
State News
KARNATAKA

ಸ್ಥಳೀಯರಿಗೆ ಹೆಚ್ಚು ಉದ್ಯೋಗ ಕಲ್ಪಿಸಿ: ಕೈಗಾರಿಕೋದ್ಯಮಿಗಳಲ್ಲಿ ಮದ್ದೂರು ಶಾಸಕ ಕೆ.ಎಂ.ಉದಯ್ ಮನವಿ

By kannadanewsnow0902/05/2026 7:54 PM KARNATAKA 2 Mins Read

ಮಂಡ್ಯ : ಕೈಗಾರಿಕೋದ್ಯಮಿಗಳು ನೆರೆ ರಾಜ್ಯಗಳ ಕಾರ್ಮಿಕರನ್ನು ನೇಮಿಸಿಕೊಳ್ಳದೆ ಸ್ಥಳೀಯರಿಗೆ ಉದ್ಯೋಗಗಳನ್ನು ಕಲ್ಪಿಸುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಬೇಕೆಂದು ಶಾಸಕ…

BIG NEWS: ಮೇ.20ರಿಂದ ರಾಜ್ಯದಲ್ಲಿ ಸಾರಿಗೆ ಸಮರ: ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನೌಕರರ ನಿರ್ಧಾರ

02/05/2026 7:49 PM

BREAKING: ರಾಜ್ಯದಲ್ಲಿ ಹಕ್ಕಿಜ್ವರದ ಭೀತಿ: ತುಮಕೂರಲ್ಲಿ ನವಿಲು H5N1 ನಿಂದ ಸಾವು ದೃಢ, ಕಟ್ಟೆಚ್ಚರಕ್ಕೆ ಸಚಿವ ಈಶ್ವರ್ ಖಂಡ್ರೆ ಸೂಚನೆ

02/05/2026 7:29 PM

ಅನಾರೋಗ್ಯದಿಂದಾಗಿ ಬೆಂಗಳೂರಿನ ಬೆಸ್ಕಾಂ ಜಾಗೃತ ದಳದ SP ಆಗಿದ್ದ ಲಾವಣ್ಯ ನಿಧನ

02/05/2026 6:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.