ಶಿವಮೊಗ್ಗ: ಜಿಲ್ಲೆಯ ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಅಡಿಕೆ ಕದಿಯುತ್ತಿದ್ದಂತ ಇಬ್ಬರು ಕಳ್ಳರನ್ನು ಎಡೆಮುರಿ ಕಟ್ಟಿ ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2023ರಲ್ಲಿ ಒಂದು ಅಡಿಕೆ ಕಳವು ಹಾಗೂ 2024ರಲ್ಲಿ ಎರಡು ಅಡಿಕೆ ಕದ್ದ ಪ್ರಕರಣಗಳು ದಾಖಲಾಗಿದ್ದವು. ಈ ಕೇಸ್ ಗಳನ್ನು ಗಂಭೀರವಾಗಿ ತೆಗೆದುಕೊಂಡಂತ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸೂಚನೆಯಂತೆ, ಡಿವೈಎಸ್ಪಿ ಗೋಪಾಕೃಷ್ಣ ನಾಯಕ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ತಂಡದಲ್ಲಿ ಸಾಗರ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಮಹಾಬಲೇಶ್ವರ ಎಸ್.ಎನ್, ಪಿಎಸ್ಐ ಸಿದ್ಧರಾಮಪ್ಪ, ಸಿಬ್ಬಂದಿಗಳಾದಂತ ಸಿಹೆಚ್ ಸಿ ಷೇಖ್ ಫೈರೋಜ್ ಅಹಮ್ಮದ್, ಪಿಸಿ ನಂದೀಶ್, ಸಿಪಿಸಿ ರವಿಕುಮಾರ್, ಸಿಪಿಸಿ ಪ್ರವೀಣ್ ಕುಮಾರ್, ಜೀಪ್ ಚಾಲಕ ಎಹೆಚ್ ಸಿ ಗಿರೀಶ್ ಬಾಬು ಹಾಗೂ ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ಸಿಬ್ಬಂದಿ ಗುರುರಾಜ್, ಇಂದ್ರೇಶ್, ವಿಜಯ್ ಕುಮಾರ್ ತನಿಖೆಗೆ ಇಳಿದರು.
ಈ ಹಿಂದಿನ ಅಡಿಕೆ ಕದ್ದ ಆರೋಪಿಗಳು ಸೇರಿದಂತೆ ಹಲವರನ್ನು ತನಿಖೆಗೆ ಸಾಗರ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಮಹಾಬಲೇಶ್ವರ ಅವರು ತಮ್ಮದೇ ಪೊಲೀಸ್ ವರಸೆಯಲ್ಲಿ ವಿಚಾರಿಸಿದಾಗ, ಸಣ್ಣ ಸುಳಿವು ಸಿಕ್ಕಿದೆ. ಈ ಸುಳಿವಿನ ಹಿನ್ನಲೆಯಲ್ಲಿ ಕಾರ್ಯಾಚರಣೆಗೆ ಇಳಿದಂತ ಪೊಲೀಸರಿಗೆ, ಮೂರು ಪ್ರಕರಣದಲ್ಲಿ ಭಾಗಿಯಾಗಿರುವ ಖಚಿತ ಮಾಹಿತಿ ಸಿಕ್ಕಿತ್ತು.
ಇಂದು ಖಚಿತ ಮಾಹಿತಿಯ ಆಧಾರದ ಮೇಲೆ ಎ.1 ಆರೋಪಿಯಾದ ನಾಗರಾಜ ಆಲಿಯಾಸ್ ಕರಡಿ, ಹಾಗೂ ಎ.2 ಆರೋಪಿಯಾದಂತ ರಾಘವೇಂದ್ರ ಆಲಿಯಾಸ್ ರೊಡ್ಡಿ ಎಂಬುವರನ್ನು ಎಡೆಮುರಿ ಕಟ್ಟಿ ಬಂಧಿಸಿದ್ದಾರೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ 2023ರಲ್ಲಿ ದಾಖಲಾಗಿದ್ದಂತ ಒಂದು ಕೇಸ್, ಸಾಗರ ಟೌನ್ ಠಾಣೆಯಲ್ಲಿ 2024ರಲ್ಲಿ ದಾಖಲಾಗಿದ್ದಂತ ಎರಡು ಪ್ರಕರಣಗಳು ಇತ್ಯರ್ಥಗೊಂಡಂತೆ ಆಗಿದೆ.
ಈ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಅವರು, ಅಡಿಕೆ ಕಳ್ಳತನ ಆರೋಪದಲ್ಲಿ ಸಾಗರದ ನೆಹರು ನಗರದ ನಾಗರಾಜ, ಎಸ್ ಎನ್ ನಗರದ ರಾಘವೇಂದ್ರ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 18 ಸಾವಿರ ಬೆಲೆಯ ಮರ ಕಡಿಯುವ ಮಿಷಿನ್, 1 ಲಕ್ಷದ 5 ಸಾವಿರ ಮೌಲ್ಯದ ಚಾಲಿ ಅಡಿಕೆ ಜಪ್ತಿ ಮಾಡಲಾಗಿದೆ ಎಂದರು.
ಇದಲ್ಲದೇ ಕೃತ್ಯಕ್ಕೆ ಬಳಸಿದ ಅಂದಾಜು 1 ಲಕ್ಷ ಮೌಲ್ಯದ ಒಂದು ಆಟೋ ರೀಕ್ಷಾ, 10 ಸಾವಿರ ಮೌಲ್ಯದ ಟಿವಿಎಸ್ ಸ್ಪೋರ್ಟ್ಸ್ ಬೈಕ್ ಜಪ್ತಿ ಮಾಡಲಾಗಿದೆ. ಈ ಮೂರು ಪ್ರಕರಣಗಳಿಂದ 2 ಲಕ್ಷದ 33 ಸಾವಿರ ಮೌಲ್ಯದ ಅಡಿಕೆ, ಮರ ಕತ್ತರಿಸುವ ಮಿಷಿನ್ ಹಾಗೂ ವಾಹನಗಳನ್ನು ಜಪ್ತಿ ಮಾಡಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಆರೋಪಿಗಳ ಪತ್ತೆ ಹಾಗೂ ಕಳ್ಳತನದ ಮಾಲು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದಂತ ಅಧಿಕಾರಿಗಳು, ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರ ಪರವಾಗಿ ಅಭಿನಂದನೆಯನ್ನು ಸಲ್ಲಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಮೈಸೂರು ಯುವ ದಸರಾ ವೀಕ್ಷಣೆಗೂ ಟಿಕೆಟ್ ಕಡ್ಡಾಯ: ಆನ್ ಲೈನ್ ಮೂಲಕ ಈ ರೀತಿ ಖರೀದಿಸಿ
‘ಪ್ರೌಢ ಶಾಲಾ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ‘ಇಂಟರ್ನೆಟ್’ ನೀಡಲು ನಿರ್ಧಾರ