ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಈ ಹಿಂದೆ ಡೆಪ್ಯೂಟೇಷನ್ ಮೇಲೆ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರನ್ನು ನೇಮಕ ಮಾಡಲಾಗಿತ್ತು. ಕೆಲ ತಿಂಗಳಿಂದ ಅವರು ವರ್ಗಾವಣೆಗೊಂಡ ನಂತ್ರ, ರೋಗಿಗಳಿಗೆ ಸಮಸ್ಯೆ ಎದುರಾಗಿತ್ತು. ಈಗ ರಾಜ್ಯ ಸರ್ಕಾರದಿಂದ ಪೂರ್ಣಾವಧಿಗೆ ಸೊರಬ ತಾಲ್ಲೂಕು ಆಸ್ಪತ್ರೆಗೆ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞ ವೈದ್ಯರನ್ನು ನೇಮಕ ಮಾಡಿ ಆದೇಶಿಸಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಸೊರಬ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರಭು ಸಾಹುಕಾರ್ ಅವರು, ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಾದ ಡಾಕ್ಟರ್ ಸುವರ್ಣಲತಾ ಅವರು ಸೋಮವಾರದಿಂದ ಲಭ್ಯವಿರುತ್ತಾರೆ. ಯಾವುದೇ ಹೆರಿಗೆ, LSCS ಹಾಗೂ ಸ್ತ್ರೀ ರೋಗಕ್ಕೆ ಸಂಬಂಧಪಟ್ಟಂತೆ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಯನ್ನು ಮಾಡಲು ನುರಿತ ತಜ್ಞರಾಗಿರುತ್ತಾರೆ. ಸೊರಬ ತಾಲೂಕಿನ ಪ್ರತಿ ಮಹಿಳೆಯರು ಹಾಗೂ ಗರ್ಭಿಣಿ ಸ್ತ್ರೀಯರು ಈ ಸೇವೆಗಳ ಸದುಪಯೋಗವನ್ನು ಪಡೆದುಕೊಳ್ಳಲು ಈ ಮೂಲಕ ಕೋರಿದ್ದಾರೆ.
ಅಂದಹಾಗೇ ಡಾ.ಸುವರ್ಣಲತಾ ಅವರು ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಯಲ್ಲಿ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಾಗಿ ಕೆಲಸ ಮಾಡುತ್ತಿದ್ದಂತವರು. ಸುಮಾರು 20 ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದಂತ ಅನುಭವ ಇವರಿಗಿದೆ. ಸಾವಿರಾರು ಹೆರಿಗೆಗಳನ್ನು ಮಾಡಿಸಿದಂತ ಹಿರಿತನವನ್ನು ಡಾ.ಸುವರ್ಣಲತಾ ಅವರು ಹೊಂದಿದ್ದಾರೆ. ಇಂತಹ ವೈದ್ಯರಿಗೆ ಸೊರಬ ತಾಲ್ಲೂಕಿನ ಜನತೆ ಉತ್ತಮ ಸಹಕಾರದೊಂದಿಗೆ ಪಡೆದುಕೊಳ್ಳಲಿ ಎಂಬುದು ನಮ್ಮ ಆಶಯ ಕೂಡ ಆಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಇದು ‘ಪೊಲೀಸ್ ಇಲಾಖೆ’ಯೇ ತಲೆತಗ್ಗಿಸುವ ಕೆಲಸ: ಓಸಿ ದಂಧೆಕೋರರಿಂದ ‘ಪೋನ್ ಪೇ’ ಮೂಲಕ ಪೊಲೀಸಪ್ಪ ‘ಲಂಚ ಸ್ವೀಕಾರ’