ಶಿವಮೊಗ್ಗ :ಶ್ರೀರಾಂಪುರ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ರಾ.ಹೆ.206ರಲ್ಲಿ ಫ್ಲೈ ಓವರ್‍ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ಪ್ರದೇಶದ ವ್ಯಾಪ್ತಿಗೊಳಪಡುವ ಶ್ರೀರಾಂಪುರ, ಗಾಜನೂರು ಭಾಗದ ಬಿ.ಎಸ್.ಎನ್.ಎಲ್ ಲೇಔಟ್, ವೀರಣ್ಣ ಬೆನವಳ್ಳಿ, ವೀರಗಾರನ ಭೈರನಕೊಪ್ಪ, ಭೂಮಿಕಾ ಅಲಾಯ್ಸ್, ಫೆಸಿಟ್ ಕಾಲೇಜ್, ಕಿಮ್ಮನೆ ಗಾಲ್ಫ್ ಕ್ಲಬ್, ಆಲದೇವರಹೊಸೂರು, ಪೊಲೀಸ್ ಲೇಔಟ್, ಗುಡ್ಡದಹರಕೆರೆ, ಇಂದಿರಾ ಬಡಾವಣೆ, ಗಿರಿದೀಪಮ್ ಸ್ಕೂಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದಿ: 15/12/20222 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಕುಂಸಿ ಪಾಲನೆ ಮತ್ತು ನಿರ್ವಹಣೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊಬೈಲ್ ಬಳಕೆದಾರರೇ ಎಚ್ಚರ ; ಈ ತಪ್ಪು ಮಾಡಿದ್ರೆ ನಿಮ್ಮ ‘ಸಿಮ್ ಕಾರ್ಡ್’ ನಿಮ್ಮನ್ನ ಜೈಲಿಗೆ ಕಳುಹಿಸುತ್ತೆ |Sim Card

ಡಿ. 17ರಂದು ವಿದ್ಯುತ್ ಅದಾಲತ್

ಶಿವಮೊಗ್ಗದ ಆಯನೂರು ಶಾಖಾ ವ್ಯಾಪ್ತಿಯ ಸಿರಿಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ದಿ: 17/12/2022 ರಂದು ಬೆಳಗ್ಗೆ 10.30 ರಿಂದ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ವಿದ್ಯುತ್ ಅದಾಲತ್ ನಡೆಸುತ್ತಿದ್ದು, ಸಿರಿಗೆರೆ ಗ್ರಾಮದ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಎಚ್ಚರ..! ಟಾಯ್ಲೆಟ್ ಸೀಟ್‌ನಿಂದ ‘ಮೂತ್ರನಾಳದ ಸೋಂಕು’ ಹರಡುತ್ತಾ? ಶಾಕಿಂಗ್‌ ಮಾಹಿತಿʼಬಿಚ್ಚಿಟ್ಟ ವೈದ್ಯರುʼ | Toilet Effect

Share.
Exit mobile version