ಬೆಂಗಳೂರು : ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವಂತೆ ಮತ್ತೊಂದು ಘಟನೆ ನಡೆದಿದ್ದು, ಜ್ಯೂಸ್ ಕುಡಿದು ಪಿಜಿಗೆ ವಾಪಸ್ ಆಗುತ್ತಿದ್ದ ವೇಳೆ ದುರುಳರು ಯುವತಿಯ ಮೈಮುಟ್ಟಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಪೀಣ್ಯದ ಎಚ್ ಎಂ ಟಿ ಲೇಔಟ್ ನಲ್ಲಿ ನಿನ್ನೆ ರಾತ್ರಿ ನಡೆದಿದೆ.

ಬೆಂಗಳೂರಲ್ಲಿ ಇತ್ತೀಚ್ಚಿಗೆ ರೋಡ್ ರೋಮಿಯೋ ಗಳ ಹುಚ್ಚಾಟಕ್ಕೆ ಯುವತಿಯರು ಬೆಚ್ಚಿ ಬಿದ್ದಿದರೆ. ಬೆಂಗಳೂರಿನ ಪಿನ್ಯಾದ ಹೆಚ್ ಎಂ ಟಿ ಲೇಔಟ್ ನಲ್ಲಿ ನಿನ್ನೆ ರಾತ್ರಿ ಒಂದು ಘಟನೆ ನಡೆದಿದೆ. ಜ್ಯೂಸ್ ಕುಡಿದು ವಾಪಸ್ ಆಗುತ್ತಿದ್ದ ಯುವತಿಯ ವೈ ಮುಟ್ಟಿ ವಿಕೃತಿ ಮೆರೆದಿದ್ದಾರೆ.

ಹೌದು ಕಾಲೇಜು ಮುಗಿಸಿಕೊಂಡು ಯುವತಿಯ ಜ್ಯೂಸ್ ಕುಡಿದು ವಾಪಸ್ ಆಗುತ್ತಿದ್ದ ಯುವತಿಯ ಮೈಮುಟ್ಟಿ ದುರುಳರು ವಿಕೃತಿ ಮೆರೆದಿದ್ದಾರೆ.ಯುವತಿ 8ನೇ ಮೈಲಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಯುವತಿ ಬಿಬಿಎ ಓದುತ್ತಿದ್ದಾಳೆ. ಜ್ಯೂಸ್ ಕುಡಿದು ವಾಪಸ್ ಪಿಜಿಗೆ ತೆರಳುವಾಗ ಈ ಒಂದು ಘಟನೆ ನಡೆದಿದೆ.ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ನಂತರ ಯುವತಿ ಜೋರಾಗಿ ಕಿರುಚಿಕೊಂಡಿದ್ದಾಳೆ.

ವಿಕೃತಿ ಮೆರೆದು ಬೈಕ್ ನಲ್ಲಿ ಪರಾರಿಯಾದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಯುವತಿ ಇದೀಗ ಠಾಣೆಗೆ ದೂರು ನೀಡಿದ್ದಾಳೆ. ಪಿಣ್ಯ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354 (a) 354 ಅಡಿ ಪ್ರಕರಣ ದಾಖಲಾಗಿದೆ.ಇದೀಗ ದುಷ್ಕರ್ಮಿಗಳ ಪತ್ತೆಗಾಗಿ ಪೀಣ್ಯ ಠಾಣೆಯ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Share.
Exit mobile version