ಶಿವಮೊಗ್ಗ: ನಗರದಲ್ಲಿ ಕೆಲವೆಡೆ ಯುವಕ ಹಾಗೂ ಬುರ್ಖಾ ಹಾಕಿಕೊಂಡಿದ್ದ ಯುವತಿ ಅನುಮಾನಾಸ್ಪದವಾಗಿ ಓಡಾಡಿಕೊಂಡಿದ್ದವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದಲ್ಲಿ ಇವರಿಬ್ಬರು ನಾವು ಕಾಶ್ಮೀರದಿಂದ ಬಂದಿದ್ದೇವೆ, ನಮಗೆ ಸಹಾಯ ಮಾಡಿ ಎಂದುಕೊಂಡು ಮನೆ ಮನೆಗೆ ಹೋಗಿ ಬೇಡುತ್ತಿದ್ದರು.ಶಿವಮೊಗ್ಗದ ಇಲಿಯಾಸ್ ನಗರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡಿಕೊಂಡಿದ್ದ ಯುವಕ ಹಾಗೂ ಯುವತಿಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರನ್ನು ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.