ಶಿವಮೊಗ್ಗ: ನ್ಯಾಯಾಲಯದ ಕಟ್ಟಡವನ್ನು ಗೋಡೌನ್ ಮಾಡಿ ಕೊಂಡಿದ್ದ ವ್ಯಕ್ತಿಯೊಬ್ಬನಿಗೆ ತೀರ್ಥಹಳ್ಳಿ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ, ಬಿಗ್ ಶಾಕ್ ನೀಡಿರುವಂತ ಘಟನೆ ನಡೆದಿದೆ.

ತೀರ್ಥಹಳ್ಳಿ ಪಟ್ಟಣದ ಶಿಬಿನಕೆರೆಯಲ್ಲಿ ಹೊಸ ನ್ಯಾಯಾಲಯವಾದ ಪ್ರಯುಕ್ತ ಸೊಪ್ಪು ಗುಡ್ಡೆಯಲ್ಲಿರುವ ಹಳೆ ನ್ಯಾಯಾಲಯದ ಕಟ್ಟಡದಲ್ಲಿ ಬೀಗಗಳನ್ನು ಹಾಕಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿತ ಮತ್ತು ನಿಷೇಧಿತ ಪ್ರದೇಶವೆಂದು ಕಟ್ಟಡಗಳಿಗೆ ಬೀಗಗಳನ್ನು ಹಾಕಲಾಗಿತ್ತು. ನ್ಯಾಯಾಲಯದ ಕಟ್ಟಡದ ಆವರಣದಲ್ಲಿ ಅನೇಕರು ತಮ್ಮ ಕಾರುಗಳನ್ನು ಅಕ್ರಮ ಪಾರ್ಕಿಂಗ್ ಮಾಡಿಕೊಂಡಿದ್ದರು. ಇದಲ್ಲದೆ ಸೊಪ್ಪುಗುಡ್ಡೆ ಎರಡನೇ ಕ್ರಾಸ್ ನಿವಾಸಿ ಮೇರಾ ರಾಮ್ ಬಿನ್ ಮಕಾನಾರಾಮ್ 48 ವರ್ಷ ಈತನು ನ್ಯಾಯಾಲಯ ಕಟ್ಟಡದ ಒಳಗೆ ಅತಿಕ್ರಮ ಪ್ರವೇಶ ಮಾಡಿ ಹಿಂಭಾಗದ ಬಾಗಿಲು ಬೀಗವನ್ನು ಮುರಿದು ಬಾಗಿಲು ಮತ್ತು ಕಿಟಕಿಗಳಿಗೆ ಹಾನಿ ಮಾಡಿ ತಾನು ವ್ಯಾಪಾರ ಮಾಡುತ್ತಿರುವ ಗುಜರಿ ಸಾಮಾನುಗಳನ್ನು ಮತ್ತು ರಟ್ಟಿನ ಬಾಕ್ಸ ಗಳನ್ನು ನ್ಯಾಯಾಲಯದ ಕಟ್ಟಡದ ಒಳಗೆ ದಾಸ್ತಾನು ಮಾಡಿದ್ದನು. ಅಲ್ಲದೇ ತನ್ನ ಎರಡು ವಾಹನಗಳನ್ನು ನ್ಯಾಯಾಲಯದ ಆವರಣದ ಒಳಗೆ ಪಾರ್ಕಿಂಗ್ ಮಾಡಿದ್ದನು.

BIG NEWS: ಹೀಗಿದೆ ಇಂದಿನ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಹೈಲೈಟ್ಸ್ | Karnataka Cabinet Meeting

ದಿನಾಂಕ 15 -11-2022 ರಂದು ತೀರ್ಥಹಳ್ಳಿ ಹಿರಿಯ ವ್ಯವಹಾರಗಳ ಸಿವಿಲ್ ನ್ಯಾಯಾಲಯ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ ದ ಆಡಳಿತ ಶಿರೆಸ್ತೆದಾರ್ ಲೀನಾ ಕೆ. ಎಸ್. ರವರು ನ್ಯಾಯಾಲಯದ ಆವರಣದ ಪರಿಶೀಲನೆಗೆ ಹೋದಾಗ ನ್ಯಾಯಾಲಯದ ಕಟ್ಟಡದ ಹಿಂಭಾಗದ ಕೋಣೆಗಳ ಬಾಗಿಲು ಮುರಿದು ಗುಜರಿ ಸಾಮಾನುಗಳು ಮತ್ತು ರಟ್ಟಿನ ಬಾಕ್ಸುಗಳನ್ನು ದಾಸ್ತಾನು ಹಾಕಿರುವುದನ್ನು ಹಾಗೂ ನ್ಯಾಯಾಲಯದ ಆವರಣದಲ್ಲಿ ಎರಡು ವಾಹನಗಳನ್ನು ನಿಲ್ಲಿಸಿರುವುದು ಕಂಡು ಬಂದಿರುತ್ತದೆ. ಅಲ್ಲದೇ ಮೇರಾ ರಾಮ್ ರವರಿಗೆ ಸಂಬಂಧಪಟ್ಟ ಇರುವುದು ಎಂದು ತಿಳಿದುಬಂದಿದೆ. ತಕ್ಷಣ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.

ಈ ಸಂಬಂಧ ತೀರ್ಥಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 448 .427. 3(1) ಮತ್ತು ಪ್ರಿವೆನ್ಷನ್ ಆಫ್ ಡ್ಯಾಮೇಜ್ ಪಬ್ಲಿಕ್ ಪ್ರಾಪರ್ಟಿ ಆಕ್ಟ್ 1984ರ ಅಡಿಯಲ್ಲಿ ಎಫ್ಐಆರ್ ರನ್ನು ದಾಖಲು ಮಾಡಿ ತೀರ್ಥಹಳ್ಳಿ ಜೆಎಂಪ್ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ಆರೋಪಿ ಮೇರಾ ರಾಮ್ ಗೆ ನ.28ರವರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಈ ಮೂಲಕ ನ್ಯಾಯಾಲಯದ ಆವರಣವನ್ನೇ ಗೋಡೌನ್ ಮಾಡಿಕೊಂಡಿದ್ದಂತ ಆರೋಪಿ ಮೇರಾ ರಾಮ್ ಜೈಲು ಪಾಲಾಗುವಂತೆ ಆಗಿದೆ.

BIG NEWS: ಬೊಮ್ಮಾಯಿಯವರೇ, ಕರ್ನಾಟಕವನ್ನು ನೀವು ಆಳುತ್ತಿದ್ದೀರೋ ಅಥವಾ ಗೂಂಡಾಗಳೋ?: ‘ಟ್ವಿಟ್’ನಲ್ಲಿ ಕಾಂಗ್ರೆಸ್ ತರಾಟೆ

ಅಂದಹಾಗೇ ತೀರ್ಥಹಳ್ಳಿ ಹೊಸ ನ್ಯಾಯಾಲಯ ಪ್ರಾರಂಭವಾದ ನಂತರ ಹಳೆ ಕಟ್ಟಡವನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಿ ನ್ಯಾಯಾಲಯದ ಕೊಠಡಿಗಳಿಗೆ ಬೀಗ ಹಾಕಲಾಗಿತ್ತು. ಕೆಲವು ದುಷ್ಕರ್ಮಿಗಳು ರಾತ್ರಿ ಹೊತ್ತು ನ್ಯಾಯಾಲಯದ ಹಿಂಭಾಗದಲ್ಲಿ ಕುಳಿತು ಮಧ್ಯ ಸೇವನೆ ಮಾಡುವುದು ಧೂಮಪಾನ ಮಾಡುವುದು ಇನ್ನಿತರೆ ಕೆಲಸಗಳಲ್ಲಿ ನ್ಯಾಯಾಲಯದ ಆಭರಣದ ಸ್ವಚ್ಛತೆಯನ್ನು ಹಾಳು ಮಾಡುತ್ತಿದ್ದರು. ಅನೇಕರು ತಮ್ಮ ಕಾರುಗಳನ್ನು ನ್ಯಾಯಾಲಯದ ಆವರಣದ ಒಳಗೆ ನಿಲ್ಲಿಸಿ ಪಾರ್ಕಿಂಗ್ ವ್ಯವಸ್ಥೆಗೆ ಮಾಡಿಕೊಂಡಿದ್ದರು .ಈ ಬಗ್ಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಮನಗಂಡು ಲೋಕೋಪಯೋಗಿ ಇಲಾಖೆಯ ಮೂಲಕ ಸ್ವಚ್ಛ ಗೊಳಿಸಲು ಮತ್ತು ನ್ಯಾಯಾಲಯ ಅವಣದಲ್ಲಿ ಸಾರ್ವಜನಿಕರು ಯಾರು ಪ್ರವೇಶ ಮಾಡದಂತೆ ಹಾಗೂ ಕಾರುಗಳನ್ನು ವಾಹನಗಳನ್ನು ಪಾರ್ಕಿಂಗ್ ಮಾಡದಂತೆ ಕ್ರಮ ಜರಗಿಸಿದ್ದಾರೆ.

ವರದಿ: ಲಿಯೋ ಅರೋಜ, ತೀರ್ಥಹಳ್ಳಿ

BIG BREAKING NEWS: ರಾಜೀವ್ ಗಾಂಧಿ ಹಂತಕರ ಬಿಡುಗಡೆ ಆದೇಶ: ಮರುಪರಿಶೀಲನೆಗೆ ಕೇಂದ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ | Rajiv Gandhi Killers

Share.
Exit mobile version