ಬೆಂಗಳೂರು : ರಾಜ್ಯದಲ್ಲಿ ನಿತ್ಯ ಸರಾಸರಿ 10 ಲಕ್ಷ ಲೀಟರ್‌ ಹಾಲು ಹೆಚ್ಚುವರಿಯಾಗಿ ಉತ್ಪಾದನೆ ಆಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಹೆಚ್ಚು ಉತ್ಪಾದಿಸಿ ತರುತ್ತಿರುವ ಹಾಲನ್ನು ಡೈರಿಗೆ ತರಬೇಡಿ ಎಂದು ನಿರಾಕರಿಸೋಕೆ ಆಗುವುದಿಲ್ಲ, ಅವರಿಂದ ಖರೀದಿ ಮಾಡಲೇಬೇಕು ಎಂದು ನಿರ್ಧರಿಸಿ ಈ ಮೊದಲು ಮಾರಾಟ ಮಾಡುತ್ತಿದ್ದ ಹಾಲಿನ ಪ್ಯಾಕೇಟ್‌ ಗಳಿಗೆ 50 ಮಿಲೀ ಹಾಲನ್ನು ಹೆಚ್ಚು ಸೇರಿಸಿ 2 ರೂಪಾಯಿ ಹೆಚ್ಚು ಹಣ ಸಂಗ್ರಹಿಸಲಾಗುತ್ತಿದೆ. ದನ್ನೇ ವಿರೋಧಪಕ್ಷಗಳು ಬೆಲೆಯೇರಿಕೆ ಎನ್ನುತ್ತಿದ್ದಾರೆ, ಅವರಿಗೆ ರೈತರ ಹಿತಕ್ಕಿಂತ ರಾಜಕೀಯವೇ ಮುಖ್ಯವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರೈತರು ಒಂದು ಲೀಟರ್‌ ಹೆಚ್ಚು ಹಾಲು ಉತ್ಪಾದನೆ ಮಾಡಿದರೆ ಅವರಿಗೆ ಅದರಿಂದ 5 ರೂಪಾಯಿ ಹೆಚ್ಚು ಲಾಭ ಆಗುತ್ತಿದೆ. ಈ ರೀತಿ ಪ್ರೋತ್ಸಾಹಧನವನ್ನು 2 ರೂಪಾಯಿಯಿಂದ 5 ರೂಪಾಯಿಗೆ ಹೆಚ್ಚು ಮಾಡಿದ್ದು ನಮ್ಮ ಸರ್ಕಾರ. ಇವತ್ತು ಹಾಲಿನ ಪ್ರಮಾಣ ಹೆಚ್ಚು ಮಾಡಿ ರೂ.2 ಬೆಲೆ ಹೆಚ್ಚು ಮಾಡಿದರೂ ಇಡೀ ದೇಶದಲ್ಲಿ ಕಡಿಮೆ ಬೆಲೆಗೆ ಹಾಲನ್ನು ಮಾರಾಟ ಮಾಡುತ್ತಿರುವುದು ಕರ್ನಾಟಕದಲ್ಲಿ ಎಂದು ತಿಳಿಸಿದ್ದಾರೆ.

Share.
Exit mobile version