ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ನೇತೃತ್ವದಲ್ಲಿ ಇಂದು ಮಹತ್ವದ ಸಚಿವ ಸಂಪುಟ ಸಭೆ ( Karnataka Cabinet Meeting ) ನಡೆಯಿತು. ಇಂದಿನ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಆ ಮುಖ್ಯಾಂಶಗಳನ್ನು ಮುಂದೆ ಓದಿ.

ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ, ಸಭೆಯ ನಿರ್ಧಾರಗಳನ್ನು ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ) ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಇಂದು 40 ವಿಷಯಗಳ ಬಗ್ಗೆ ಸಂಪುಟ ತೀರ್ಮಾನ ತೆಗೆದುಕೊಂಡಿದೆ ಎಂದರು.

ಸಿಎಂ ರಾಜೀನಾಮೆ ಕೇಳುವ ಕಾಂಗ್ರೆಸ್ ಮುಖಂಡರ ಬಾಲಿಶ, ಹುಡುಗಾಟಿಕೆಯ ವರ್ತನೆ- ಎನ್.ರವಿಕುಮಾರ್ ಖಂಡನೆ

ರಾಜ್ಯದಲ್ಲಿ ಹೊಸ ಶ್ರೀಗಂಧ ನೀತಿ-2022ಗೆ ಸಮ್ಮತಿಸಲಾಗಿದೆ. ರೈತರು ಖಾಸಗಿ ಜಮೀನಿನಲ್ಲಿ ಶ್ರೀಗಂಧ ಬೆಳೆಯಬಹುದು. ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ವಿಶ್ವಮಟ್ಟದಲ್ಲಿ ಶ್ರೀಗಂಧಕ್ಕೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಸರಳೀಕರಣ ಮಾಡಿದ್ದೇವೆ. ಓಪನ್ ಮಾರುಕಟ್ಟೆಗೆ ಅವಕಾಶ ನೀಡಿದ್ದೇವೆ. ರೈತರಿಗೆ ಸಂಪೂರ್ಣ ಮಾರ್ಗದರ್ಶನ ನೀಡಲಿದ್ದೇವೆ. ಶ್ರೀಗಂಧ ಬೆಳೆಯಲು ರಕ್ಷಣೆಯೂ ಸಿಗಲಿದೆ ಎಂದು ತಿಳಿಸಿದರು.

ನಮಗೆ ಶ್ರೀಗಂಧದ ಲಭ್ಯತೆ ಕೊರತೆಯಿದೆ. ನಮ್ಮ ಸರ್ಕಾರಿ ಸಂಸ್ಥೆಗೆ ಶ್ರೀಗಂಧ ಬೇಕಿದೆ. ಖಾಸಗಿ ಸಂಸ್ಥೆಗೂ ಶ್ರೀಗಂಧ ಬೇಕಿದೆ. ಮಾರಾಟಕ್ಕೆ ಕೆಲವು ನಿರ್ಬಂದವಿತ್ತು. ಈಗ ಆ ನಿರ್ಭಂದಗಳನ್ನ ತೆಗೆಯಲಾಗಿದೆ. ಹಾಗಾಗಿ ಈ ನೀತಿಯನ್ನ ತರಲಾಗಿದೆ ಎಂದರು.

BREAKING NEWS: ದೆಹಲಿಯ ಶ್ರದ್ಧಾ ಕೊಲೆ ಪ್ರಕರಣ: ವೀಡಿಯೋ ಕಾನ್ಫೆರೆನ್ಸ್ ಮೂಲಕ ಅಫ್ತಾಬ್ ಹಾಜರುಪಡಿಸಲು ಕೋರ್ಟ್ ಅನುಮತಿ | Shraddha Walkar murder case

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ ಏರಿಸುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆಯುಷ್ಮಾನ್ ಯೋಜನೆಯಡಿ ತೀರ್ವ ನಿಗಾಘಟಕ ಸ್ಥಾಪಿಸಲಾಗುತ್ತದೆ. ತುಮಕೂರು ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲಾಗುತ್ತದೆ. 56 ಕೋಟಿ ವೆಚ್ಚಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು.

ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉಪಕರಣ, ರೋಗ ಪತ್ತೆ ಕಿಟ್ ಖರೀದಿಗೆ ಸಂಪುಟ ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ 154  ಕೋಟಿ ವೆಚ್ಚದಲ್ಲಿ ಖರೀದಿಗೆ ಸಮ್ಮತಿಸಲಾಗಿದೆ ಎಂದರು.

ಎನ್ ಹೆಚ್ ಎಂ ಫಂಡ್ ನಲ್ಲಿ ಆಸ್ಪತ್ರೆಗಳ ಮೇಲ್ದರ್ಜೆಗೇರಿಸಲಾಗುತ್ತದೆ. ಏಳು ಆಸ್ಪತ್ರೆಗಳಿಗೆ 158 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ತಾಯಿ ಮತ್ತು ಮಗು ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲಾಗುತ್ತದೆ. ತರಿಕೆರೆಯಲ್ಲಿ 100 ಹಾಸಿಗೆ ತಾಯಿ ಮಗು ಆಸ್ಪತ್ರೆ ನಿರ್ಮಿಸಲಾಗುತ್ತದೆ. ಲಿಂಗಸುಗೂರಿನಲ್ಲಿ 50 ಹಾಸಿಗೆ ತಾಯಿ‌ಮಗು ಆಸ್ಪತ್ರೆ ನಿರ್ಮಿಸಲಾಗುವುದು. ಹರಿಹರದಲ್ಲಿ 50 ಹಾಸಿಗೆ ತಾಯಿ ಮಗು ಆಸ್ಪತ್ರೆ, ಗೋಕಾಕ್ ನಲ್ಲಿ 200 ಬೆಡ್ ತಾಯಿ ಮಗು ಆಸ್ಪತ್ರೆಗೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.

BIG NEWS: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಅಖಾಡಕ್ಕಿಳಿದ ಡಿಕೆಶಿ ಬಾವ: ತೀವ್ರ ಪೈಪೇಟಿ ಕೆರಳಿಸಲಿದೆ ಚನ್ನಪಟ್ಟಣ ಕ್ಷೇತ್ರ

ಧಾರವಾಡ- ಹಳಿಯಾಳ ರಸ್ತೆ ಕೆಳಸೇತುವೆಗೆ ಅನುಮತಿ ನೀಡಲಾಗಿದೆ. ಸುಮಾರು 41 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ. ತುಮಕೂರು ನರ್ಸಿಂಗ್ ಕಾಲೇಜು‌ನಿರ್ಮಾಣಕ್ಕಾಗಿ 20 ಕೋಟಿ ವೆಚ್ಚದ ನಿರ್ಮಾಣಕ್ಕೆ ಅನುಮತಿಸಲಾಗಿದೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಟ್ರಾಮಾಕೇರ್ ಸೆಂಟರ್ ಗೆ ಸಂಪುಟಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದರು.

ಶ್ರೀಕಂಠೇಶ್ವರ ದೇಗುಲ ವಿಐಪಿ ಕೊಠಡಿ ನಿರ್ಮಾಣಕ್ಕೆ 16 ಕೋಟಿ, ಇಎಸ್ ಐ ಆಸ್ಪತ್ರೆ ಉಪಕರಣ ಖರೀದಿಗೆ  ಸುಮಾರು 44 ಕೋಟಿ ವೆಚ್ಷಕ್ಕೆ ಅನುಮೋದನೆ ನೀಡಲಾಗಿದೆ. ಬಳ್ಳಾರಿ ತಾಲೂಕಿನ 6 ಜನವಸತಿ ಪ್ರದೇಶಕ್ಕೆ ಕುಡಿಯುವ ನೀರು ಸೌಲಭ್ಯ ಕಲ್ಪಿಸೋ ನಿಟ್ಟಿನಲ್ಲಿ 11 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ಅಂಜನಾಪುರದಲ್ಲಿ ಸಾರಿಗೆ ಕಟ್ಟಡ ನಿರ್ಮಾಣಕ್ಕಾಗಿ 25 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಡೇಟ್ ಫಿಕ್ಸ್ ಮಾಡಲಾಗಿದೆ. ಡಿಸೆಂಬರ್ 19ರಿಂದ ಅಧಿವೇಶನ ಆರಂಭವಾಗಲಿದೆ. ಡಿಸೆಂಬರ್ 30 ರವರೆಗೆ ಅಧಿವೇಶನ ನಡೆಯಲಿದೆ ಎಂದು ಹೇಳಿದರು.

ಶಿವಮೊಗ್ಗ: ಶಿಕಾರಿಪುರ ತಾಲೂಕು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ರಾಮನಗರ ರಾಜೀವ್ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕಾಗಿ 600 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಗೌರಿಬಿದನೂರಿನಲ್ಲಿ ನೂತನ ನ್ಯಾಯಾಲಯ ಕಟ್ಟಡವನ್ನು 12 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ನಮ್ಮನೆ ಸುಮ್ಮನೆ ಟ್ರಸ್ಟ್ ಗೆ ಗಂಗೊಂಡನಹಳ್ಳಿಯಲ್ಲಿ ಸರ್ವೆ ನಂಬರ್ 18ರಲ್ಲಿ 15 ಗುಂಟೆ ಭೂಮಿ ನೀಡಲು ಒಪ್ಪಿಗೆಯನ್ನು ನೀಡಲಾಗಿದೆ.

ರಾಜ್ಯದ ಗ್ರೂಪ್ ಸಿ ಮತ್ತು ಡಿ ಗ್ರೂಪ್ ನೌಕರರಿಗೆ ವರ್ಗಾವಣೆ ನೀತಿ ಅನುಷ್ಠಾನಗೊಳಿಸಲಾಗುತ್ತಿದೆ. 7 ವರ್ಷ ಸೇವೆ ಸಲ್ಲಿಸಿದವರಿಗೆ ಅನ್ವಯವಾಗಲಿದೆ. ಪತಿ,ಪತ್ನಿ ಇದ್ದರೆ ಅವರಿಗೆ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಲಾಗುತ್ತಿದೆ. ಇಂದು ಈ ನಿಯಮ ತಿದ್ದುಪಡಿಗೂ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ ಎಂದರು.

BREAKING NEWS: ರಾಜ್ಯದ ರೈತರಿಗೆ ಭರ್ಜರಿ ಸಿಹಿಸುದ್ದಿ: ಶ್ರೀಗಂಧ ನೀತಿಗೆ ಸಚಿವ ಸಂಪುಟ ಅಸ್ತು, ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ

Share.
Exit mobile version