ಶಿವಮೊಗ್ಗ : ನಿನ್ನೆ ಶಿವಮೊಗ್ಗದ ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ರೌಡಿಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು, ಘಟನೆಯಲ್ಲಿ ಗೌಸ್ ಮತ್ತು ಶೋಯೆಬ್ ಎಂಬ ಇಬ್ಬರು ರೌಡಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಾಟೆಯಲ್ಲಿ ಗಾಯಗೊಂಡಿದ್ದ ರೌಡಿ ಯಾಸೀನ್ ಖುರೇಷಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾರೆ. ಹೌದು ಚಿಕಿತ್ಸೆ ಫಲಿಸದೇ ರೌಡಿಶೀಟರ್ ಯಾಸಿನ್ ಖುರೇಶಿ ಸಾವನ್ನಪ್ಪಿದ್ದಾನೆ. ಯಾಸಿನ್ ಕುರೇಶಿಗೆ ನಿನ್ನೆ ಮತ್ತೊಂದು ಗ್ಯಾಂಗ್ ಚಾಕು ಇರಿದಿದತ್ತು.
ಶಿವಮೊಗ್ಗದ ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆಯ ಬಳಿ ಈ ಘಟನೆ ನಡೆದಿತ್ತು. ಖುರೆಷಿ ಸಹಚರ ಪ್ರತಿದಾಳಿಗೆ ಇಬ್ಬರು ರೌಡಿಗಳು ಬಲಿಯಾಗಿದ್ದರು. ರೌಡಿಶೀಡರ್ಗಳಾದ ಗೌಸ್ ಹಾಗೂ ಶೋಯಬ್ ಅಲಿಯಾಸ್ ಸೇಬು ಕೊಲೆಯಾಗಿದ್ದರು. ಘಟನೆಯಲ್ಲಿ ಯಾಸಿನ್ ಗಂಭೀರವಾಗಿ ಗಾಯಗೊಂಡಿದ್ದು ಇಂದು ಆತ ಕೂಡ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಖಾಸಗಿ ಆಸ್ಪತ್ರೆಯಲ್ಲಿ ಯಾಸಿನ್ ಕುರೇಶಿ ಚಿಕಿತ್ಸೆ ಪಡಿಸದೆ ಸಾವನ್ನಪ್ಪಿದ್ದಾನೆ ಗ್ಯಾಂಗ್ ವಾರ್ ಗೆ ಮೂರನೇ ಬಲಿಯಾದ ರೌಡಿಶೀಟರ್ ಯಾಸಿನ್ ಕುರೇಶಿ. ಗ್ಯಾಂಗ್ವಾರ್ ಸಂಬಂಧ 15 ಆರೋಪಿಗಳನ್ನು ಬಂಧಿಸಲಾಗಿದ್ದು ಶಿವಮೊಗ್ಗದ ಕೋಟೆ ಠಾಣೆ ಪೋಲೀಸರಿಂದ ಪ್ರಕರಣದ ತನಿಖೆ ನಡೆಯುತ್ತಿದೆ.