ಶಿವಮೊಗ್ಗ: ಇಲ್ಲಿನ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮೊದಲ ದಿನವಾದ ಏ.12 ರಂದು ಒಟ್ಟು 06 ನಾಮಪತ್ರ ಸಲ್ಲಿಕೆ ಆಗಿವೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಎಸ್.ಕೆ.ಪ್ರಭು, ಎಎಪಿ ಪಕ್ಷದಿಂದ ಸುಭಾನ್ ಖಾನ್, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಅರುಣ ಕೆ.ಎ, ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಎಸ್.ಈಶ್ವರಪ್ಪ ಮತ್ತು ರವಿಕುಮಾರ್ ಎಸ್ ನಾಮಪತ್ರ ಸಲ್ಲಿಸಿದರು. ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಪರವಾಗಿ ಸೂಚಕರು ಸಲ್ಲಿಸಿದ ನಾಮಪತ್ರ ಸೇರಿದಂತೆ ಇಂದು ಐದು ಅಭ್ಯರ್ಥಿಗಳಿಂದ ಒಟ್ಟು 06 ನಾಮಪತ್ರಗಳು ಸಲ್ಲಿಕೆಯಾಗಿವೆ.