ಕೊಡಗು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಿಲ್ಲವೆಂದು ಕಾಂಗ್ರೆಸ್ ಪಕ್ಷಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಂದು ದೆಹಲಿಯಲ್ಲಿ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಮತ್ತೆ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ ಈ ವಿಚಾರವಾಗಿ ಕೊಡೋಗಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಅವರಿಗೆ ಯಾವುದೇ ರೀತಿಯಾಗಿ ಅನ್ಯಾಯವಾಗಿಲ್ಲ ಎಂದು ತಿಳಿಸಿದರು.
ಈ ವಿಷಯದ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷಕ್ಕೆ ಭಾರತೀಯ ಜನತಾ ಪಕ್ಷದ ಅವಮಾನ ಮಾಡಿದ್ದಾರೆ, ಬಿಜೆಪಿ ಪಕ್ಷ ಟಿಕೆಟ್ ಕೊಡಲಿಲ್ಲ ಎಂದು ಅವರನ್ನು ಪಕ್ಷಕ್ಕೆ ಬಂದಾಗ ಟಿಕೆಟ್ ನೀಡಿದೆವು. ಅಸೆಂಬ್ಲಿ ಚುನಾವಣೆಯಲ್ಲಿ ಅವರು ಅವರ ಕ್ಷೇತ್ರದಲ್ಲಿ ಸೋತರು.ಆಗ ನಾವು ಅವರಿಗೆ ಎಂಎಲ್ಸಿ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಯಾವುದೇ ರೀತಿಯಾಗಿ ಅನ್ಯಾಯ ಆಗಿಲ್ಲ ಅವಮಾನ ಕೂಡ ಆಗಿಲ್ಲ. ಅವರನ್ನು ನಾನು ಗೌರವಯುತವಾಗಿ ನಡೆಸಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡೋಗ್ಗಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಬಲವಂತದಿಂದ ಕರೆದುಕೊಂಡು ಹೋಗಿದ್ದಾರೆ : ಡಿಕೆಶಿ
ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಬಿಜೆಪಿಗೆ ಜಗದೀಶ್ ಶೆಟ್ಟರ್ ಮರು ಸೇರ್ಪಡೆ ವಿಚಾರವಾಗಿ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ನಿನ್ನೆ ನಾನು ಕರೆ ಮಾಡಿ ಮಾತನಾಡಿದಾಗ ನಾನು ಬಿಜೆಪಿಗೆ ಹೋಗಲ್ಲ ಅಂತ ಹೇಳಿದ್ದರು.ನಾವು ಸೀನಿಯರ್ ಲೀಡರ್ ಎಂದು ಅವರಿಗೆ ಸ್ಥಾನಮಾನವನ್ನು ಕೊಟ್ಟಿದ್ವಿ.
ಎಲ್ಲರಿಗೂ ಈಗ ನಾನು ಫ್ಯಾಕ್ಸ್ ನಲ್ಲಿ ರಾಜಿನಾಮೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಅವರನ್ನ ಒತ್ತಡದಲ್ಲಿ ಕರೆದುಕೊಂಡು ಹೋಗಿದ್ದಾರೋ ಏನೋ ಗೊತ್ತಿಲ್ಲ. ಜನ ಅವರನ್ನು 35000 ಓಟಿನಿಂದ ತಿರಸ್ಕರಿಸಿದರು ಕೂಡ ನಾವು ಬಹಳ ಗೌರವಯುತವಾಗಿ ಅವರನ್ನು ನಡೆಸಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.ನನಗೆ ಇದುವರೆಗೂ ರಾಜೀನಾಮೆ ಪತ್ರ ತಲುಪಿಲ್ಲ ನಾನು ಕಾಂಗ್ರೆಸ್ ಅಧ್ಯಕ್ಷನಾಗಿ ಬಿ ಫಾರ್ಮ್ ಅವರಿಗೆ ಬರೆದು ಕೊಟ್ಟಿದ್ದೆ. ನನಗೆ ಇವತ್ತಿನವರೆಗೂ ರಾಜನ ವೈಕುರಿದಂತೆ ಯಾವುದೇ ಪತ್ರ ಬಂದಿಲ್ಲ.