ಹುಬ್ಬಳ್ಳಿ : ಇಂದು ಬೆಳಿಗ್ಗೆ ಶಾಸಕ ಮಹೇಶ್ ಟೆಂಗಿನಕಾಯಿ ಜಗದೀಶ್ ಶೆಟ್ಟರ್ ಬಿಜೆಪಿಗೆ ಅನಿವಾರ್ಯವಲ್ಲ ಅವರನ್ನು ಪಕ್ಷಕ್ಕೆ ಕರೆತರುವ ಬಗ್ಗೆ ಎಲ್ಲಿಯೂ ಕೂಡ ಚರ್ಚೆ ನಡೆದಿಲ್ಲ. ಶೆಟ್ಟರ್ ಪಕ್ಷಕ್ಕೆ ಸೇರ್ಪಡೆ ಕುರಿತಂತೆ ಯಾವುದೇ ರೀತಿಯಾಗಿ ಮಾತುಕತೆ ಆಗಿಲ್ಲ ಎಂದು ಹುಬ್ಬಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ತಿಳಿಸಿದ್ದರು.
ಆದರೆ ಇದೀಗ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಹೈಕಮಾಂಡ್ ಏನು ತೀರ್ಮಾನ ಮಾಡಿದ್ದಾರೆ ಅದಕ್ಕೆ ಅದನ್ನು ಸ್ವಾಗತ ಮಾಡುತ್ತೇವೆ. ಬಿಜೆಪಿ ಪಕ್ಷಕ್ಕೆ ಅನಿವಾರ್ಯತೆ ಇರುವುದು ಯಾವುದೇ ಇಲ್ಲ. ಯಾರೊಬ್ಬರೂ ಕೂಡ ಅನಿವಾರ್ಯತೆ ಇಲ್ಲ ಅವರಿಗೆ ಅನಿವಾರ್ಯತೆ ಇರುವುದರಿಂದ ಅವರು ಬರುತ್ತಾರೆ. ಹೈಕಮಾಂಡ್ ನಿರ್ಧರಿಸಿದ್ದು ಅದನ್ನು ನಾವು ಸ್ವಾಗತ ಮಾಡುತ್ತೇವೆ ಎಂದರು.
ಬೂತ್ ಮಟ್ಟದ ಕಾರ್ಯಕರ್ತರು ಹಿಡಿದುಕೊಂಡು ರಾಜ್ಯ ನಾಯಕರು ಯಾರೇ ಬಂದರು ಪಾರ್ಟಿಯಲ್ಲಿ ಇದ್ದರೂ ಎಲ್ಲರೂ ಕೂಡಿ ಕಾರ್ಯ ನಿರ್ವಹಿಸುತ್ತೇವೆ.ಈಗ ಜಗದೀಶಟ್ಟರು ಬಂದಿರುವುದರಿಂದ ಎಲ್ಲರೂ ಜೊತೆಗೂಡಿ ಕೆಲಸ ಮಾಡುತ್ತೇವೆ. ಜಗದೀಶ್ ಶೆಟ್ಟರ್ ಗೆ ಲೋಕಸಭೆ ಟಿಕೆಟ್ ನೀಡುವುದರ ಕುರಿತಾಗಿ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ತಿಳಿಸಿದರು.