ಬೆಂಗಳೂರು : ಕೇರಳದಲ್ಲಿ ನನ್ನ ಮೇಲೆ ದೊಡ್ಡ ಪ್ರಯೋಗ ನಡೆಯುತ್ತಿದೆ.ಯಾವ ಪೂಜೆ ಯಾರು ಮಾಡುತ್ತಿದ್ದಾರೆ ಎಲ್ಲವು ಗೊತ್ತಿದೆ. ನನ್ನ, ಸಿಎಂ ಹಾಗೂ ಸರ್ಕಾರದ ವಿರುದ್ಧ ಪೂಜೆ ನಡೆಯುತ್ತಿದೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ರಾಜರಾಜೇಶ್ವರಿ ದೇಗುಲದಲ್ಲಿ ಯಾಗ ನಡೆಯುತ್ತಿದೆ. ನನ್ನ ವಿರುದ್ಧ ಶತ್ರು ಭೈರವಿಯಾಗ ನಡೆಯುತ್ತಿದೆ. ಅಘೋರಿಗಳ ಮೂಲಕ ಈ ಒಂದು ಯಜ್ಞ ಮಾಡಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಪಂಚ ಬಲಿಕೊಡುತ್ತಿದ್ದಾರೆ. 21 ಮೇಕೆ, 3 ಎಮ್ಮೆ ಹಾಗೂ 21 ಕುರಿಗಳನ್ನು ಬಲಿಕೊಡುತ್ತಿದ್ದಾರೆ. ಅವರ ಪ್ರಯತ್ನ ನಡೆಯುತ್ತಿದೆ ನಡೀಲಿ ಆದರೆ ನಾವು ನಂಬಿರುವ ದೇವರು ನಮ್ಮನ್ನು ಕಾಪಾಡುತ್ತಾನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.