ಮಂಗಳೂರು: ನಗರದಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಾರಿಕ್ 2020ರ ಮಂಗಳೂರಿನ ಪ್ರತ್ಯೇಕ ಇಸ್ಲಾಮಿಕ್ ಸ್ಟೇಟ್ ಪ್ರಕರಣದ ಪ್ರಮುಖ ಆರೋಪಿಗಳಾದ ಮುಸಾಬಿರ್ ಹುಸೇನ್, ಅಬ್ದುಲ್ ಮಥೀನ್ ತಾಹಾ ಮತ್ತು ಅರಾಫತ್ ಅಲಿ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
BREAKING NEWS : ‘ರಾಜ್ಯಸಭಾ ಮಾಜಿ ಸದಸ್ಯ’ ಅಬ್ದುಲ್ ಸಮದ್ ಸಿದ್ದೀಖಿ ಇನ್ನಿಲ್ಲ | Abdul Samad Siddiqui
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈತನು ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳಿಂದ ಪ್ರಭಾವಿತನಾಗಿದ್ದಾನೆ ಎಂದು ತಿಳಿಸಿದರು.ಶಾರಿಕ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಾಸಿ ಎಂದು ಸ್ಪಷ್ಟವಾಗಿದೆ. ಈತನ ಮೇಲೆ ಈ ಮೊದಲು ಮೂರು ಪ್ರಕರಣಗಳು ದಾಖಲಾಗಿವೆ. ಮುಸಾಬಿರ್ ಹುಸೇನ್ ಮತ್ತು ಮಥೀನ್ ತಾಹಾ ವಿರುದ್ಧ 2020ರಲ್ಲಿ ಬೆಂಗಳೂರಿನಲ್ಲಿ ಪ್ರಕರಣದ ದಾಖಲಾಗಿತ್ತು. ಇನ್ನು ಗೋಡೆ ಬರಹ ಪ್ರಕರಣದಲ್ಲಿ ತಲೆಮರೆಸಿಕೊಂಡ ಅರಾಫತ್ ಅಲಿ ದುಬೈನಲ್ಲಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಈವರೆಗೂ ನಾಲ್ವರನ್ನು ಬಂಧಿಸಲಾಗಿದೆ. ಮೈಸೂರಿನ ಇಬ್ಬರು, ಮಂಗಳೂರಿನ ಒಬ್ಬ ಹಾಗೂ ಊಟಿಯಿಂದ ಒಬ್ಬನನ್ನು ಬಂಧಿಸಿ ಕರೆತರಲಾಗಿದೆ ಎಂದರು.