ಮಂಗಳೂರು : ಮಂಗಳೂರು ಆಟೋ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಇತ್ತೀಚೆಗೆ ಉಡುಪಿ ಮಠಕ್ಕೆ ಕೂಡ ಬಂದಿದ್ದನು ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಅಕ್ಟೋಬರ್ 16 ರಂದು ಉಡುಪಿಯ ಕಾರ್ ಸ್ಟ್ರೀಟ್ ಪ್ರದೇಶಕ್ಕೆ ಬಂದು ಕಾರ್ಕಳ ಮತ್ತು ಬಂಟ್ವಾಳಕ್ಕೆ ಪ್ರಯಾಣ ಬೆಳೆಸಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃಷ್ಣಮಠದ ಕಾರ್ ಸ್ಟ್ರೀಟ್ ಪ್ರದೇಶದ ಅಂಗಡಿಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಶಾರೀಖ್ ಉಡುಪಿ ಮಠಕ್ಕೆ ಬಂದು ಹೋಗಿರುವ ಕುರಿತು ಗೊತ್ತಾಗಿದೆ. ಅಕ್ಟೋಬರ್ 16 ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬೆದರಿಕೆಯ ಹಿನ್ನೆಲೆಯಲ್ಲಿ ಕೃಷ್ಣ ಮಠ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
BREAKING NEWS : ಚಿಲ್ಲರೆ ವ್ಯಾಪಾರಕ್ಕಾಗಿ ಡಿ.1ರಂದು ‘ಡಿಜಿಟಲ್ ರೂಪಾಯಿ’ ಪರಿಚಯ, RBI ಘೋಷಣೆ | Digital Rupee
BIGG NEWS: ಹಿಂದೂಗಳ ನಕಲಿ ಐಡಿ ಕಾರ್ಡ್ ಬಳಸಿಕೊಂಡು ವ್ಯಾಪಾರ ನಡೆಸಿದ ಅನ್ಯಕೋಮಿನ ವ್ಯಾಪಾರಸ್ಥರು