ಬೆಂಗಳೂರು : ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾಗಿ 10 ತಿಂಗಳು ಕಳೆದಿದ್ದು, ಏಪ್ರಿಲ್ ಅಂತ್ಯದವರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್ನಲ್ಲಿ ಬರೊಬ್ಬರಿ 200 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.
ರಾಜ್ಯ ಸರ್ಕಾರ 2023ರ ಜೂ. 11ರಿಂದ ಶಕ್ತಿ ಯೋಜನೆ ಆರಂಭಿಸಿತು. ಈ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ನಿಗಮ ಕೆಎಸ್ಆರ್ಟಿಸಿ, ಎನ್ಡಬ್ಲೂಕೆಆರ್ಟಿಸಿ, ಬಿಎಂಟಿಸಿ, ಕೆಕೆಆರ್ಟಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ದಿನಾಂಕ 11-06-202 ರಿಂದ 30-06-2023ರವರೆಗೆ ನಾಲ್ಕು ಸಾರಿಗೆ ನಿಗಮಗಳಲ್ಲಿ 10,54,45,047 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇವರ ಟಿಕೆಟ್ ಮೌಲ್ಯ 248,30,13,266 ಆಗಿದೆ ಎಂದಿದೆ.
ದಿನಾಂಕ 01-07-2023 ರಿಂದ 31-07-2023ರವರೆಗೆ 19,63,00,625 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದರೇ, ದಿನಾಂಕ 01-08-2023 ರಿಂದ 31-08-2023ರವರೆಗೆ 20,03,60,680 ಮಹಿಳೆಯರು, ದಿನಾಂಕ 01-09-2023 ರಿಂದ 30-09-2023ರವರೆಗೆ 18,95,49,754 ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುವುದಾಗಿ ಅಂಕಿ ಅಂಶದ ಮಾಹಿತಿ ನೀಡಿದೆ.
ದಿನಾಂಕ 01-10-2023ರಿಂದ 31-10-2023ರವರೆಗೆ 18,26,17,460 ಮಹಿಳೆಯರು, 01-11-2023 ರಿಂದ 30-11-2023ರವರೆಗೆ 18,25,74,439 ಮಹಿಳೆಯರು ಉಚಿತವಾಗಿ ಸಾರಿಗೆ ಬಸ್ಸುಗಳಲ್ಲಿ ಸಂಚರಿಸಿದ್ದಾರೆ. ದಿನಾಂಕ 01-12-2023ರಿಂದ 31-12-2023ರವರೆಗೆ 19,55,52,662 ಮಹಿಳೆಯರು, ದಿನಾಂಕ 01-01-2024ರಿಂದ 31-01-2024ರವರೆಗೆ 19,26,34,708 ಮಹಿಳೆಯರು ಉಚಿತವಾಗಿ ನಾಲ್ಕು ಸಾರಿಗೆ ನಿಗಮಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಮಾಹಿತಿ ನೀಡಿದೆ.
ಒಟ್ಟಾರೆಯಾಗಿ ದಿನಾಂಕ 11-06-2023ರಿಂದ 01-05-2023ರವರೆಗೆ ಕೆ ಎಸ್ ಆರ್ ಟಿಸಿ ಬಸ್ಸುಗಳಲ್ಲಿ 60,52,88,107 ಮಹಿಳೆಯರು, ಬಿಎಂಟಿಸಿ ಬಸ್ಸಲ್ಲಿ 63,61,69,156 ಮಹಿಳೆಯರು, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ 46,59,20,579 ಮಹಿಳೆಯರು, ಕೆ ಕೆ ಆರ್ ಟಿಸಿ ಬಸ್ಸುಗಳಲ್ಲಿ 29,70,02,860 ಸೇರಿದಂತೆ ಒಟ್ಟು 200,43,80,702 ಮಹಿಳೆಯರು ಉಚಿತವಾಗಿ ಶಕ್ತಿ ಯೋಜನೆಯ ಅಡಿಯಲ್ಲಿ ಸಾರಿಗೆ ಬಸ್ಸುಗಳಲ್ಲಿ ಸಂಚರಿಸಿದ್ದಾರೆ. ಇದರ ಒಟ್ಟು ಟಿಕೆಟ್ ಮೌಲ್ಯ 4836,72,74,251 ಆಗಿದೆ ಎಂಬುದಾಗಿ ಅಂಕಿ ಅಂಶಗಳ ಮೂಲಕ ಕೆ ಎಸ್ ಆರ್ ಟಿಸಿ ಮಾಹಿತಿ ನೀಡಿದೆ.