ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದ್ದೆ ಪ್ರಮುಖ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ ತಡ ಅದರಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯ ಜಾರಿಯಾದ ಬಳಿಕ ಮಹಿಳೆಯರು ಹೇಳದೆ ಕೇಳದೆ ಹೊರಟು ಹೋಗುತ್ತಿರುವ ಘಟನೆಗಳು ನಡೆಯುತ್ತಿವೆ.
ಇದೀಗ ತವರಿಗೆ ಪತ್ನಿಯೊಬ್ಬಳು ಹೇಳದೆ ಕೇಳದೆ ತೆರಳಿರುವುದಕ್ಕೆ ಕುಪಿತಗೊಂಡ ಪತಿ ಕೆಎಸ್ಆರ್ಟಿಸಿ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ನಡೆದಿದೆ.ಹೌದು ಪತ್ನಿ ಫ್ರೀ ಬಸ್ನಲ್ಲಿ ತವರಿಗೆ ಹೋಗಿದ್ದನ್ನ ಕಂಡು ಸಿಟ್ಟಿಗೆದ್ದ ಕುಡುಕ ಗಂಡ ಕೆಎಸ್ಆರ್ಟಿಸಿ (KSRTC) ಸಿಬ್ಬಂದಿ ಮೇಲೆ ಚಾಕು, ದೊಣ್ಣೆಯಿಂದ ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.
ಉಚಿತ ಬಸ್ ಇದೆ ಎಂದು ತನಗೆ ಹೇಳದೆ ಪತ್ನಿ ತವರಿಗೆ ಹೊಗಿದ್ದಾಳೆ ಎಂದು ಚಿಕ್ಕಸಂದ್ರದ ನಾಗ ಎಂಬಾತ ಸಿಟ್ಟಿಗೆದ್ದು ರಂಪಾಟ ನಡೆಸಿದ್ದಾನೆ. ಮೊದಲು ಚಾಕು ಹಿಡಿದು ಹಲ್ಲೆ ನಡೆಸಲು ಯತ್ನಿಸಿದಾಗ ಸ್ಥಳೀಯರು ತಡೆದಿದ್ದಾರೆ. ಬಳಿಕ ದೊಣ್ಣೆ ಹಿಡಿದುಕೊಂಡು ಹಲ್ಲೆಗೆ ಮುಂದಾದಾಗ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ನಾಗನನ್ನು ತಡೆದಿದ್ದಾರೆ