ಬೆಂಗಳೂರು : ರಾಜ್ಯ ಸರ್ಕಾರ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಾಗಿ, ಸರ್ಕಾರಿ ಬಸ್ಗಳಲ್ಲಿ ಮಹಿಳೆಯರೇ ಇದೀಗ ತುಂಬಿ ತುಳುಕುತ್ತಿದ್ದಾರೆ.ಇದೀಗ ಬೆಂಗಳೂರಿನಲ್ಲಿ ಒಂದು ಘಟನೆ ನಡೆದಿದ್ದು, ಕಿಟಕಿ ಪಕ್ಕ ಕುಳಿತ ಮಹಿಳೆ ಉಗಿಯಲು ಕಿಟಕಿಯಿಂದ ತಲೆ ಹೊರಗೆ ಹಾಕಿ ಕಿಟಕಿಯಲ್ಲಿ ತನ್ನ ತಲೆ ಸಿಲಿಕಿಸಿಕೊಂಡು ಅವಾಂತರ ಸೃಷ್ಟಿಸಿಕೊಂಡಿದ್ದಾಳೆ.
ಹೌದು ಇದು ನೋಡೋಕೆ ಹಾಸ್ಯಸ್ಪದವಾಗಿದ್ದರು, ಆದರೆ ಇದರಿಂದ ಮಹಿಳೆ ತನ್ನ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಳು.ಬಸ್ ರಸ್ತೆಯ ಮೇಲೆ ಚಲಿಸುತ್ತಿದ್ದಾಗಲೇ ಕಿಟಕಿಯೊಳಗೆ ತಲೆತೂರಿಸಿ ಉಗುಳಲು ಯತ್ನಿಸಿ ತಲೆಯೇ ಲಾಕ್ ಆಗಿ ಅವಾಂತರ ಮಾಡಿಕೊಂಡಿದ್ದಾಳೆ.ಉಗುಳುವ ಬರದಲ್ಲಿ ಕಿಟಕಿಯೊಳಗೆ ತಲೆ ತೂರಿಸಿರುವ ಮಹಿಳೆ ಹಿಂದಕ್ಕೆ ಎಳೆಯಲು ಹರಸಾಹಸ ಪಟ್ಟಿದ್ದಾಳೆ.
ಅದೃಷ್ಟವಶಾತ್ ಆಚೀಚೆ ಬಸ್ ಲಾರಿ ಓವರ್ ಟೇಕ್ ಮಾಡುವ ತಾಗಿದ್ರೆ ತಲೆಯೇ ಹೋಗುತ್ತಿತ್ತೇನೋ. ಎಷ್ಟೇ ಪ್ರಯತ್ನಿಸಿದರೂ ಮಹಿಳೆ ತಲೆಯನ್ನ ಕಿಟಕಿಯಿಂದ ಹಿಂದಕ್ಕೆ ತೆಗೆಯಲು ಆಗಿಲ್ಲ. ಈ ವೇಳೆ ಮಹಿಳೆ ಪರದಾಡುತ್ತಿರುವುದನ್ನ ಗಮನಿಸಿದ ಕೆಎಸ್‌ಅರ್‌ಟಿಸಿ ಬಸ್‌ನ ಚಾಲಕ, ಕಾರ್ಯನಿರ್ವಾಹಕ ದಾರಿ ಮಧ್ಯೆ ಬಸ್ ನಿಲ್ಲಿಸಿ ಬಳಿಕ ಜಾಗರೂಕತೆಯಿಂದ ಮಹಿಳೆಯನ್ನ ಕಿಟಕಿಯಿಂದ ಸುರಕ್ಷಿತವಾಗಿ ತೆಗೆದಿದ್ದಾರೆ.ಇದನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಇವೆಲ್ಲ ಬೇಕಿತ್ತಾ ಅಂತ ಕಮೆಂಟ್ ಮಾಡಿದ್ದಾರೆ.