ನವದೆಹಲಿ : ಇತ್ತೀಚೆಗೆ, ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲ್ಪಟ್ಟ ಮತ್ತು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಎಂಟು ಭಾರತೀಯ ಮಾಜಿ ನೌಕಾಪಡೆಯ ಸಿಬ್ಬಂದಿಯನ್ನ ನಿನ್ನೆಯಷ್ಟೇ ಬಿಡುಗಡೆ ಮಾಡಲಾಗಿದೆ.
ಮಾಜಿ ಯೋಧರ ಬಿಡುಗಡೆಗೆ ಮತ್ತು ಹಸ್ತಾಂತರಕ್ಕೆ ಕತಾರ್ ಸರ್ಕಾರಕ್ಕೆ ಭಾರತ ಮನವರಿಕೆ ಮಾಡಿದ್ದು, ಪ್ರಮುಖ ರಾಜತಾಂತ್ರಿಕತೆಯನ್ನ ಸಾಧಿಸಿತು. ಇದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಗೆಲುವು ಎಂದು ಹೇಳಲಾಗುತ್ತಿದೆ. ವಿದೇಶಾಂಗ ಸಚಿವಾಲಯವೂ ಕೂಡ ಇದರ ಪೂರ್ಣ ಕ್ರೆಡಿಟ್ ಪ್ರಧಾನಿ ಮೋದಿಯವರಿಗೆ ನೀಡಿದೆ.
ಆದ್ರೆ, ಈ ನಡುವೆ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅವರು ಹಸ್ತಾಂತರ ಪ್ರಕ್ರಿಯೆಯಲ್ಲಿ ಶಾರುಖ್ ಖಾನ್ ಅವರ ಪಾತ್ರವೂ ಇದೆ ಎಂದು ಹೇಳಿದ್ದಾರೆ. ಕತಾರ್ ನಾಯಕರೊಂದಿಗೆ ಮಾತುಕತೆ ವಿಫಲವಾದ ನಂತರ, ಮೋದಿ ಅವರು ಎಸ್ಆರ್ಕೆ ಅವರನ್ನ ಭಾಗಿಯಾಗುವಂತೆ ವಿನಂತಿಸಿದರು ಮತ್ತು ಯೋಧರನ್ನ ಬಿಡುಗಡೆ ಮಾಡಲು ದುಬಾರಿ ಪರಿಹಾರಕ್ಕಾಗಿ ‘ಶೇಖ್’ಗಳಿಗೆ ಮನವರಿಕೆ ಮಾಡಿಕೊಟ್ಟರು ಎಂದು ಹಿರಿಯ ರಾಜಕಾರಣಿ ಎಕ್ಸ್ನಲ್ಲಿ ತಮ್ಮ ಪೋಸ್ಟ್’ನಲ್ಲಿ ಬರೆದುಕೊಂಡಿದ್ದಾರೆ. ಅಂದ್ಹಾಗೆ, ದೋಹಾದಲ್ಲಿ ನಡೆದ ಎಎಫ್ಸಿ ಏಷ್ಯನ್ ಕಪ್ 2023 ಫೈನಲ್ನಲ್ಲಿ ಶಾರುಖ್ ಖಾನ್ ಕತಾರ್ ಪ್ರಧಾನಿಯನ್ನ ಭೇಟಿಯಾಗಿದ್ದರು.
Over the next two days, I will be visiting UAE and Qatar to attend various programmes, which will deepen India's bilateral relations with these nations.
My visit to UAE will be my seventh since assuming office, indicating the priority we attach to strong India-UAE friendship. I…
— Narendra Modi (@narendramodi) February 13, 2024
ಬೆಳಿಗ್ಗೆನೇ ಬೇಯಿಸಿದ ‘ಮೊಟ್ಟೆ’ ತಿನ್ನುವುದ್ರಿಂದ ಆಗುವ ಲಾಭಗಳೇನು.? ತೂಕ ಹೆಚ್ಚುತ್ತಾ.? ಕಮ್ಮಿಯಾಗುತ್ತಾ.?
‘UPI’ ಆರಂಭ ಅಸ್ತಿತ್ವದಲ್ಲಿರುವ ಬಲವಾದ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಮೈಲಿಗಲ್ಲು: ಮಾರಿಷಸ್ ರಾಯಭಾರಿ
BIG NEWS: ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’11 DYSP, 51 PI’ ವರ್ಗಾವಣೆ