ಬೆಳಗಾವಿ : ಮಹಿಳೆಯ ಅಪಹರಣ ಪ್ರಕರಣದಲ್ಲಿ ಜಾಮೀನು ಅರ್ಜಿ ವಜಾ ಆಗಿರುವುದರಿಂದ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಅವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಬಗ್ಗೆ ನಾನು ಕೂಡಾ ಪೊಲೀಸರಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಒಂದು ಅಪಹರಣ ಪ್ರಕರಣದಲ್ಲಿ ರೇವಣ್ಣ ಜಾಮೀನು ಅರ್ಜಿ ಹಾಕಿದ್ದರು. ಆದರೆ, ಆ ಅರ್ಜಿ ವಜಾ ಆಗಿರಬೇಕು. ಆದ್ದರಿಂದ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿರಬೇಕು ಅನಿಸುತ್ತದೆ ಎಂದು ತಿಳಿಸಿದರು.
ನಾವು ಯಾವುದಕ್ಕೂ ಭಾಗಿಯಾಗಲ್ಲ : ಡಿಸಿಎಂ ಡಿಕೆ
ಇನ್ನು ಇದೆ ವಿಷಯವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಗದಗ್ ನಲ್ಲಿ ಪ್ರತಿಕ್ರಿಯೆ ನೀಡಿ ನ್ಯಾಯಾಲಯ ಉಂಟು ಕಾನೂನುಂಟು. ನಾವು ಯಾವುದಕ್ಕೂ ಭಾಗಿಯಾಗಲ್ಲ. ನಮಗೆ ಅವಶ್ಯಕತೆ ಇಲ್ಲ. ಕೋರ್ಟ್, ಕಾನೂನಲ್ಲಿ ಏನಾದ್ರೂ ರಕ್ಷಣೆ ಪಡೆದುಕೊಳ್ಳಲಿ. ನಾವು ವಿಚಾರಕ್ಕೆ ಹೋಗಲ್ಲ. ಕುಮಾರಣ್ಣ ಆರಂಭದಲ್ಲಿ ಏನೋ ಹೇಳಿದ್ದಾರೆ. ಅದಕ್ಕೆ ಬದ್ಧ ಎಂದು ಹೇಳಿದರು.