ಹಾಸನ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು HD ರೇವಣ್ಣ ಹಾಗೂ ಪ್ರಜ್ವಲ್ ನಿವಾಸದಲ್ಲಿ ಸಂತ್ರಸ್ತೆಯರ ಸಮ್ಮುಖದಲ್ಲಿ ಎಸ್ಐಟಿ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಪ್ರಜ್ವಲ್ ಹಾಗೂ ಎಚ್ ಡಿ ರೇವಣ್ಣ ವಿರುದ್ಧ 2 ಕೆಸ್ ದಾಖಲಾಗಿದೆ.
ಇಂದು ಸಂತ್ರಸ್ಯರ ಜೊತೆಗೆ ಸ್ಥಳ ಮಹಜರು ಸಾಧ್ಯತೆ ಇದೆ ಎನ್ನಲಾಗಿದೆ. ರೇವಣ್ಣ ವಿರುದ್ಧ ಎರಡು ಕೆ ಎಸ್ ದಾಖಲಾಗಿದೆ. ಪ್ರಜ್ವಲ್ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಆರೋಪ ಹಾಗೂ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅಪಹರಣ ಕೇಸ್ ದಾಖಲಾಗಿದೆ. ಪ್ರಕರಣದ ಕುರಿತಂತೆ ಈಗಾಗಲೇ ಜಡ್ಜ್ ಮುಂದೆ ಸಂತ್ರಸ್ತರು ಹೇಳಿಕೆಯನ್ನು ನೀಡಿದ್ದಾರೆ.ಸೆಕ್ಷನ್ 164 ರ ಅಡಿ ಈಗಾಗಲೇ ಹೇಳಿಕೆಯನ್ನು ದಾಖಲು ಮಾಡಿದ್ದಾರೆ.
ಹೇಳಿಕೆ ದಾಖಲಾಗಿರುವ ಹಿನ್ನೆಲೆಯಲ್ಲಿ ಇಂದು ಸ್ಥಳ ಮಹಜರು ನಡೆಯಲಿದೆ. ಲೈಂಗಿಕ ಕಿರುಕುಳ ಆರೋಪದಲ್ಲಿ ಎಚ್ ಡಿ ರೇವಣ್ಣ ನಿವಾಸದಲ್ಲಿ ಹಾಗೂ ಅತ್ಯಾಚಾರ ಕೇಸ್ ನಲ್ಲಿ ಪ್ರಜ್ವಲ್ ಮನೆಯಲ್ಲಿ ಸ್ಥಳ ಮಹಜರು ನಡೆಸಲಿದೆ.ಹಾಸನದ ಸಂಸದರ ನಿವಾಸದಲ್ಲಿ ಸ್ಥಳ ಮಹಜರು ಸಾಧ್ಯತೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಈಗಾಗಲೇ ಎಸ್ಐಟಿ ನಿನ್ನೆ ಜಿಲ್ಲೆಯಲ್ಲಿ ಮೂರು ಸ್ಥಳಗಳಲ್ಲಿ ಪರಿಶೀಲನೆ ನಡೆಸಿದೆ. ಹಾಗಾಗಿ ಇಂದು ವಿಡಿಯೋದಲ್ಲಿ ಆಧರಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ ಇಂದು ಸಂತ್ರಸ್ತರ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸುವ ಸಾಧ್ಯತೆ ಎನ್ನಲಾಗಿದೆ.