ಹಾಸನ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಆರ್‌ಸಿ ರಸ್ತೆಯಲ್ಲಿರುವ ಸಂಸದರ ಕಚೇರಿಯಲ್ಲಿ ನಿನ್ನೆ ಎಸ್ಐಟಿ ಸ್ಥಳ ಮಹಜರು ನಡೆಸಿತು. ಸಂತ್ರಸ್ತೆಯ ಸಮ್ಮುಖದಲ್ಲಿ ನಿನ್ನೆ ರಾತ್ರಿ ಎಸ್ಐಟಿ ಸ್ಥಳ ಮಹಜರು ನಡೆಸಿದೆ, ಮಹಜರು ಪ್ರಕ್ರಿಯೆ ಬಳಿಕ ನಿವಾಸದ ಕೀ ವಶಕ್ಕೆ ಪಡೆದಿದೆ.ಪರಿಶೀಲನೆ ನಡೆಸಿದ ಬಳಿಕ ಸಂಸದರ ನಿವಾಸಕ್ಕೆ SIT ಇದೀಗ ಬೀಗ ಹಾಕಿದೆ.
ನಿನ್ನೆ SIT ಅಧಿಕಾರಿಗಳು ಸಂಸದರ ನಿವಾಸವನ್ನ ಸಂಪೂರ್ಣವಾಗಿ ಸೀಜ್ ಮಾಡಲಾಗಿದ್ದು, ನಿನ್ನೆ ರಾತ್ರಿ 5 ಗಂಟೆ ಕಾಲ ಮಹಜರು, ಪರಿಶೀಲನೆ ನಡೆಸಲಾಗಿದೆ. ಸಂಸದರ ನಿವಾಸದ ಮೊದಲ ಮಹಡಿಯ ಕೊಠಡಿಯಲ್ಲಿ ಅತ್ಯಾಚಾರ ಆಗಿದೆ ಎನ್ನುವ ಆರೋಪ ಕೇಳಿಬಂದಿದೆ. ಸಂಸದರ ಸರ್ಕಾರಿ ನಿವಾಸದಲ್ಲೇ ಅಶ್ಲೀಲ ವಿಡಿಯೋ ರೆಕಾರ್ಡ್ ಶಂಕೆ ವ್ಯಕ್ತವಾಗಿದೆ. ಅಶ್ಲೀಲ ವಿಡಿಯೋ ರೆಕಾರ್ಡ್ ಸಂಬಂಧವೂ ಎಸ್ಐಟಿ ತನಿಖೆ ನಡೆಸಲಿದೆ. ಸಂಸದರ ನಿವಾಸದಿಂದ ಬೆಂಗಳೂರಿಗೆ ಹೋಗಿ ವಿದೇಶಕ್ಕೆ ಪ್ರಜ್ವಲ್ ತೆರಳಿದ್ದಾರೆ ಎನ್ನಲಾಗಿದೆ.
ಈಗಾಗಲೇ ಪ್ರಜ್ವಲ್ ರೇವಣ್ಣ ಅವರು ದುಬಾಯಿ ನಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ವಾಸ್ತವ್ಯ ಹೊಡೆದು ತಂದೆಯ ಬಂಧನದ ಬೆನ್ನೆಲೆ ಅವರು ಇಂದು ಭಾರತಕ್ಕೆ ಆಗಮಿಸಲಿದ್ದು ಮಂಗಳೂರಿನ ಏರ್ಪೋರ್ಟಿಗೆ ಸಂಜೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ನಾಳೆ ಎಸ್ಐಟಿ ವಿಚಾರಣೆಗೆ ಅವರು ಹಾಜರಾಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದ್ದು ಆದರೆ ಎಸ್ಐಟಿ ಅಧಿಕಾರಿಗಳು ಮಂಗಳೂರು ಏರ್ಪೋರ್ಟ್ ಗೆ ಬಂದ ತಕ್ಷಣ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.