ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೂರು ನೀಡಿದ ಸಂತ್ರಸ್ತೆಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಿದ್ದು ಎಸ್ ಐ ಟಿ ಅಧಿಕಾರಿಗಳು ಇದೀಗ ತಮ್ಮ ಕಚೇರಿಗೆ ವಿಚಾರಣೆಗೆ ಕರೆತರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಪ್ರಜ್ವಲ್ ವಿರುದ್ಧ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅಶ್ಲೀಲ ವಿಡಿಯೋಗಳ ಕುರಿತಂತೆ ಸೊಸೈಟಿ ಅಧಿಕಾರಿಗಳು ಈಗಾಗಲೇ ಒಂಬತ್ತು ಸಂತ್ರಸ್ತ ಮಹಿಳೆಯರನ್ನು ಸಂಪರ್ಕಿಸಿದ್ದು ಅವರೆಲ್ಲರಿಗೂ ಧೈರ್ಯ ಹೇಳಿ ದೂರು ನೀಡುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಪ್ರಜ್ವಲ್ ರೇವಣ್ಣ ಅವರು ದುಬಾಯಿ ನಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ವಾಸ್ತವ್ಯ ಹೊಡೆದು ತಂದೆಯ ಬಂಧನದ ಬೆನ್ನೆಲೆ ಅವರು ಇಂದು ಭಾರತಕ್ಕೆ ಆಗಮಿಸಲಿದ್ದು ಮಂಗಳೂರಿನ ಏರ್ಪೋರ್ಟಿಗೆ ಸಂಜೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ನಾಳೆ ಎಸ್ಐಟಿ ವಿಚಾರಣೆಗೆ ಅವರು ಹಾಜರಾಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದ್ದು ಆದರೆ ಎಸ್ಐಟಿ ಅಧಿಕಾರಿಗಳು ಮಂಗಳೂರು ಏರ್ಪೋರ್ಟ್ ಗೆ ಬಂದ ತಕ್ಷಣ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.