ಹಾಸನ : ಲೈಂಗಿಕ ಕಿರುಕುಳ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ವಿಚಾರವಾಗಿ ಈಗಾಗಲೇ ಎಸ್ಐಟಿ ತನಿಖೆಯನ್ನು ಚುರುಕುಗೊಳಿಸಿದೆ. ಎಸ್ಐಟಿ ತನಿಖೆಯನ್ನು ಚುರುಕುಗೊಳಿಸಿದ ಕೂಡಲೇ ಇದೀಗ ಹಾಸನದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಸಂಸದರ ನಿವಾಸಕ್ಕೆ ಪೊಲೀಸರು ಬೀಗ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು ಹಾಸನದ ಆರ್ಸಿ ರಸ್ತೆಯಲ್ಲಿರುವ ಪ್ರಜ್ವಲ್ ಸರ್ಕಾರಿ ನಿವಾಸಕ್ಕೆ ಇದೀಗ ಬೀಗ ಜಡಿಯಲಾಗಿದೆ. ಸಂಸದರ ನಿವಾಸದಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ಸಂತ್ರಸ್ತೇ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡಿದ್ದರು. ಇದೀಗ ಸಂಸದರ ನಿವಾಸದ ಆವರಣ ಪ್ರವೇಶ ನಿರ್ಭಂಧಿಸಿ ಬೀಗ ಹಾಕಲಾಗಿದೆ ಎಂದು ಹೇಳಲಾಗುತ್ತಿದ್ದು SIT ತನಿಖೆ ಹಿನ್ನೆಲೆ ಇದೀಗ ಬೀಗ ಹಾಕಲಾಗಿದೆ.
ಅಲ್ಲದೆ ಇದೇ ಒಂದು ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಹಾಗೂ ವಿರುದ್ಧ ಈಗಾಗಲೇ ಎರಡು ದಾಖಲಾಗಿದ್ದು, ಇಂದು ಎಸ್ಐಟಿ ಸಂತ್ರಸ್ತೆಯರನ್ನು ಕರೆದುಕೊಂಡು ಅವರ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ. ಹೀಗಾಗಿ ಹಾಸನದ ಹೊಳೆನರಸೀಪುರದಲ್ಲಿರುವ ಹೆಚ್‍ಡಿ ರೇವಣ್ಣ ಅವರ ಮನೆ ಹಾಗೂ ಪ್ರಜ್ವಲ್ ರೇವಣ್ಣರ ಸಂಸದರ ನಿವಾಸದಲ್ಲಿ ಸಂತ್ರಸ್ತೆಯರ ಸಮ್ಮುಖದಲ್ಲಿ ಎಸ್ಐಟಿ ಸ್ಥಳ ಮಹಜರು ನಡೆಸಲಿದೆ ಎಂದು ತಿಳಿದು ಬಂದಿದೆ.