ಮೈಸೂರು: ಮುರುಘಾ ಮಠದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣವನ್ನು ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸುವಂತೆ ಒಡನಾಡಿ ಸಂಸ್ಥೆ ಮುಖ್ಯಸ್ಥ ಸ್ಟ್ಯಾನ್ಲಿ ಒತ್ತಾಯಿಸಿದ್ದಾರೆ.
BIGG NEWS: ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಒಳ್ಳೆಯದು; ಚರ್ಚೆ ಶುರುವಾಯ್ತು ಸಂತೋಷ್ ಲಾಡ್ ಹೇಳಿಕೆ
ಮೈಸೂರಿನಲ್ಲಿ ಮಾತನಾಡಿದ ಅವರು, ಮಕ್ಕಳ ಮೇಲೆ ಪೋಷಕರಿಂದಲೇ ಒತ್ತಡ ಹೇರಲಾಗುತ್ತಿದೆ. ಚಿತ್ರದುರ್ಗ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯನ್ನು ಅಮಾನತಿನಲ್ಲಿಡಬೇಕು. ಇದು ಪ್ರಕರಣದ ಮೊದಲ ದಿನದಿಂದ ಆರೋಪಿಗಳ ಪರ ಕೆಲಸ ಮಾಡುತ್ತಿದೆ. ಈ ಬಗ್ಗೆ ಒಂದು ವಾರದಲ್ಲಿ ಉತ್ತರ ನೀಡುವಂತೆ ರಾಜ್ಯ ಸಮಿತಿ ನೋಟಿಸ್ ಕೂಡ ನೀಡಿದೆ.
BIGG NEWS: ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಒಳ್ಳೆಯದು; ಚರ್ಚೆ ಶುರುವಾಯ್ತು ಸಂತೋಷ್ ಲಾಡ್ ಹೇಳಿಕೆ
ಬಾಲ ಮಂದಿರದಲ್ಲಿದ್ದಾಗಲೇ ಬಾಲಕಿ ಮೇಲೆ ತಂದೆಯಿಂದ ಒತ್ತಡ ಹೇರಲಾಗಿದೆ. ಬಾಲಮಂದಿರದ ಸಿಬ್ಬಂದಿ ಸಹ ಇದನ್ನು ಕೇಳಿಸಿಕೊಂಡಿದ್ದಾರೆ. ಹೀಗಾಗಿ ಸರ್ಕಾರವು ಪ್ರಕರಣವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಿ ಎಲ್ಲರನ್ನೂ ವಿಚಾರಣೆ ಮಾಡಿ ಸತ್ಯಾಂಶ ಹೊರಬೇಕಿದೆ.