ಚಿತ್ರದುರ್ಗ: ಇಲ್ಲಿ ಮುರುಘ ಮಠದ ಮುರುಘಾ ಶ್ರೀಗಳ ವಿರುದ್ದ ಕೇಳಿ ಬಂದಿರುವ ಲೈಂಗಿಕ ಆರೋಪಕ್ಕೆ ಸಂಬಂಧಪಟ್ಟಂಥೆ, ಇಂದು ಸಂತ್ರಸ್ಥ ಬಾಲಕಿಯರಿಗೆ ಇಂದು ಮೆಡಿಕಲ್ ಟೆಸ್ಟ್ ನಡೆಸಲಾಗುತ್ತದೆ ಎನ್ನಲಾಗಿದೆ.
ಇದೇ ವೇಳೆ ಪ್ರಕರಣ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆಯಾಗಿದ್ದು, ಜಿಲ್ಲಾ ಎಸ್ಪಿಯವರ ಆದೇಶ ಅನ್ವಯ ತನಿಖೆಯನ್ನು ಪೋಲಿಸ್ ಅಧಿಕಾರಿಗಳು ನಡೆಸಲು ಮುಂದಾಗಿದ್ದು, ಇಂದು ವೈದ್ಯಕೀಯ ಪರೀಕ್ಷೆಗೆ ಬಾಲಕಿಯರನ್ನು ಹಾಗೂ ಮುರುಘಾ ಶ್ರೀಗಳನ್ನು ಒಳಪಡಿಸುವ ಸಾಧ್ಯತೆ ಎನ್ನಲಾಗಿದೆ. ಮುರುಘಾ ಶ್ರೀಗಳನ್ನು ಕೂಡ ಮೆಡಿಕಲ್ ಟೆಸ್ಟ್ ಗೆ ಒಳಪಡಿಸಲಾಗುತ್ತೆ ಎನ್ನಲಾಗಿದ್ದು, ಒಂದು ವೇಳೆ ಆರೋಪದಲ್ಲಿ ಸತ್ಯಾಂಶ ಕಂಡು ಬಂದ್ರೆ ಪೋಲಿಸರು ಶ್ರೀಗಳನ್ನು ಹೆಚ್ಚಿನ ವಿಚಾರಣೆಗಾಗಿ ಅವರನ್ನು ವಶಕ್ಕೆ ಪಡೆದುಕೊಳ್ಳಬಹುದು ಎನ್ನಲಾಗಿದೆ. ಸದ್ಯ ಸಂತ್ರಸ್ಥ ಬಾಲಕಿಯರು ಒಡನಾಡಿ ಪುನರ್ ವಸತಿ ಕೇಂದ್ರದಲ್ಲಿದ್ದು, ಕೇಂದ್ರದ ಮೇಲ್ವಿಚಾರಣ ಅಧಿಕಾರಿಗಳ ಉಪಸ್ಥಿತಿಯಲ್ಲೇ ಸದ್ಯ ಬಾಲಕಿಯರು ಚಿತ್ರದುರ್ಗಕ್ಕೆ ಆಗಮಿಸಿದ್ದು, ಇಂದು ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.