ಮಧ್ಯಪ್ರದೇಶ: ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ರ್ಯಾಗಿಂಗ್ ಸಾಮಾನ್ಯವಾಗಿಬಿಟ್ಟಿದೆ. ಬೇರೆಯವರಿಗೆ ತೊಂದ್ರೆ ಕೊಡೋದೆ ಅವರ ಕೆಲಸ. ಇದಕ್ಕೆ ನಿದರ್ಶನವೆಂಬಂತೆ, ಮಧ್ಯಪ್ರದೇಶದ ಸರ್ಕಾರಿ ವೈದ್ಯಕೀಯ ಕಾಲೇಜೊಂದರಲ್ಲಿ ತಲೆತಗ್ಗಿಸುವಂತ ಘಟನೆಯೊಂದು ನಡೆದಿದೆ.
ಇಂದೋರ್ನ ಎಂಜಿಎಂ ಮೆಡಿಕಲ್ ಕಾಲೇಜಿನಲ್ಲಿ ಹಿರಿಯ ವೈದ್ಯಕೀಯ ಪದವಿ ಮತ್ತು ಬ್ಯಾಚುಲರ್ ಆಫ್ ಸರ್ಜರಿ (MBBS) ವಿದ್ಯಾರ್ಥಿಗಳು ಕೆಲವು ಕಿರಿಯ ವೈದ್ಯಕೀಯ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಹೌದು, ಹಿರಿಯ MBBS ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಗಳಿಗೆಗೆ ʻದಿಂಬಿನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಮತ್ತು ತಮ್ಮ ಮಹಿಳಾ ಬ್ಯಾಚ್ಮೇಟ್ಗನ್ನು ನಿಂದಿಸುವಂತೆ ಒತ್ತಾಯಿಸಿದ್ದಾರೆʼ ಎಂದು ಆರೋಪಿಸಲಾಗಿದೆ.
ಈ ಸಂಕಷ್ಟ ಎದುರಿಸಿದ ಜೂನಿಯರ್ ವಿದ್ಯಾರ್ಥಿಯೊಬ್ಬ ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಆ್ಯಂಟಿ ರ್ಯಾಗಿಂಗ್ ಸಹಾಯವಾಣಿಗೆ ಕರೆ ಮಾಡಿ ತಮ್ಮ ಸಂಕಷ್ಟ ಹೇಳಿಕೊಂಡಿದ್ದಾನೆ. ʻಹಿರಿಯ ವಿದ್ಯಾರ್ಥಿಗಳು ದಿಂಬು ಸೆಕ್ಸ್ ಮಾಡುವಂತೆ ಮತ್ತು ಬ್ಯಾಚ್ಮೇಟ್ಗಳ ವಿರುದ್ಧ ನಿಂದನೀಯ ಟೀಕೆ ಮಾಡಲು ಹಾಗೂ ಬಲವಂತವಾಗಿ ಪರಸ್ಪರ ಕಪಾಳಮೋಕ್ಷ ಮಾಡಿಸಿದ್ದಾರೆʼ ಎಂದು ಕಿರಿಯ ವಿದ್ಯಾರ್ಥಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ಇದೀಗ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆ ಪ್ರಭಾರಿ ತೆಹಜೀಬ್ ಖಾಜಿ ಹೇಳಿದ್ದಾರೆ.
Good News : ರೈತ ಸಮುದಾಯಕ್ಕೆ ಸಿಹಿಸುದ್ದಿ : `ರೈತ ಶಕ್ತಿ ಯೋಜನೆ’ಯಡಿ `ಡಿಸೇಲ್ ಸಹಾಯಧನ
PM Kisan Yojana : `ಕಿಸಾನ್ ಸಮ್ಮಾನ್ ನಿಧಿ’ ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ