ಮುಂಬೈ: ಪೋಷಕರ ವಿರೋಧದ ಕಾರಣದಿಂದ ಒಬ್ಬ ವ್ಯಕ್ತಿ ತಾನು ನೀಡಿದ ವಿವಾಹದ ಭರವಸೆಯಿಂದ ಹಿಂದಕ್ಕೆ ಸರಿದರೆ ಅವರ ಸಂಬಂಧ ಅತ್ಯಾಚಾರದ ಅಪರಾಧವಾಗುವುದಿಲ್ಲ ಎಂದು ಮುಂಬೈ ಹೈಕೋರ್ಟ್ ನ ನಾಗ್ಪುರ ಪೀಠ ತೀರ್ಪು ನೀಡಿದೆ.
ವಿವಾಹದ ಆಮಿಷವೊಡ್ಡಿ ಅತ್ಯಾಚಾರ ಎಸಗಲಾಗಿದೆ ಎಂದು ಆಪಾದಿಸಿ ಮಹಿಳೆಯೊಬ್ಬರು ದಾಖಲಿಸಿದ ದೂರಿನ ವಿಚಾರಣೆ ನಡೆಸಿ ನಾಗ್ಪುರ ಹೈಕೋರ್ಟ್ ಪೀಠವು, 31 ವರ್ಷದ ವ್ಯಕ್ತಿಯನ್ನು ದೋಷಮುಕ್ತಗೊಳಿಸಿದೆ.
ಇವರ ಸಂಬಂಧದ ಆರಂಭದಿಂದ ಸಂತ್ರಸ್ತೆಯನ್ನು ವಿವಾಹವಾಗುವ ಉದ್ದೇಶ ಹೊಂದಲಾಗಿತ್ತು. ಈ ವ್ಯಕ್ತಿಗೆ ವಿವಾಹ ಮುರಿಯೋ ಉದ್ದೇಶ ಇರಲಿಲ್ಲ. ತನ್ನ ಆಸೆಯನ್ನು ಪೂರೈಸಿಕೊಳ್ಳಲು ಈ ಸುಳ್ಳು ಭರವಸೆ ನೀಡಲಾಗಿದೆ ಎಂದು ಸಾಬೀತುಪಡಿಸುವ ಯಾವ ದಾಖಲೆಗಳೂ ಇಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಅರ್ಜಿದಾರರು ವಿವಾಹವಾಗಲು ಸಿದ್ಧರಿದ್ದರು ಎಂದು ಎಫ್ಐಆರ್ ನಲ್ಲಿ ಹೇಳಲಾಗಿತ್ತು ಎಂಬುದನ್ನು ನ್ಯಾಯಪೀಠ ಗಮನಿಸಿ ಈ ತೀರ್ಪು ನೀಡಿದೆ.
ಪೋಷಕರು ಒಪ್ಪಿಗೆ ನೀಡದ ಏಕೈಕ ಕಾರಣದಿಂದ ಈ ವ್ಯಕ್ತಿ ವಿವಾಹ ಪ್ರಸ್ತಾವನೆಯಿಂದ ಹಿಂದಕ್ಕೆ ಸರಿದಿದ್ದಾರೆ. ಇದು ಭಾರತೀಯ ದಂಡಸಂಹಿತೆಯ ಸೆಕ್ಷನ್ 375 (ಮಹಿಳೆಯ ಒಪ್ಪಿಗೆ ಇಲ್ಲದೇ ಆಕೆಯ ಜತೆ ಸಂಭೋಗ ನಡೆಸುವ ಅಪರಾಧ) ವ್ಯಾಪ್ತಿಗೆ ಬರುವ ಅಪರಾಧವಾಗುವುದಿಲ್ಲ ಎಂದು ನ್ಯಾಯಮೂರ್ತಿ ಮಹೇಂದ್ರ ಚಂದ್ವಾನಿ ಅಭಿಪ್ರಾಯಪಟ್ಟಿದ್ದಾರೆ.
BIG NEWS: ರಾಜ್ಯ ಸರ್ಕಾರದಿಂದ ‘VA ನೇಮಕಾತಿ’ಯಲ್ಲಿ ಮಹತ್ವದ ಬದಲಾವಣೆ: ‘ಸ್ಪರ್ಧಾತ್ಮಕ ಪರೀಕ್ಷೆ’ ನಿಗದಿ
BIG NEWS: ‘ಸರ್ಕಾರಿ ಕಾರ್ಯಕ್ರಮ’ಗಳ ಆರಂಭದಲ್ಲೇ ‘ನಾಡಗೀತೆ’ ಹಾಡುವುದು ಕಡ್ಡಾಯ – ‘ರಾಜ್ಯ ಸರ್ಕಾರ’ ಆದೇಶ