ಕಲಬುರ್ಗಿ : ಕಲ್ಬುರ್ಗಿಯಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಭಾರಿ ಮಳೆಗೆ ನೆನೆದಿದ್ದ ಮನೆಯ ಗೋಡೆ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಅಫ್ಜಲ್ಪುರ ತಾಲೂಕಿನ ಹೊಳೆ ಬೋಸಗಾ ಗ್ರಾಮದಲ್ಲಿ ದುರ್ಘಟನೆ ನಡೆದಿದೆ.
ಮನೆಯ ಗೋಡೆ ಕೋಸಿದು ಬಿದ್ದು ಲಕ್ಷ್ಮೀಬಾಯಿ (50) ಎನ್ನುವ ಮಹಿಳೆ ಸಾವನಪ್ಪಿದ್ದಾರೆ ಕಳೆದ ವಾರ ಸುರಿದ್ದಿದ್ದ ಭಾರಿ ಮಳೆಯಿಂದಾಗಿ ಮನೆಯ ಗೋಡೆ ಅರ್ಧ ಶಿಥಿಲಗೊಂಡಿತ್ತು. ಇದೀಗ ನಿನ್ನೆ ಸುರಿದ ಮತ್ತೆ ಭಾರಿ ಮಳೆಗೆ ಮನೆಯ ಗೋಡೆ ಕುಸಿದಿದ್ದು, ಲಕ್ಷ್ಮಿ ಬಾಯಿ ಸವಣ್ಣಪ್ಪಿದ್ದಾರೆ. ಘಟನೆ ಕುರಿತು ಅಫ್ಜಲ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.