ನೋಯ್ಡಾ: ತೀವ್ರ ಚಳಿ ಮತ್ತು ಮಂಜಿನ ಹಿನ್ನೆಲೆಯಲ್ಲಿ ಘಾಜಿಯಾಬಾದ್ನಲ್ಲಿ 1ನೇ ತರಗತಿಯಿಂದ 12 ನೇ ತರಗತಿಯವರೆಗಿನ ಶಾಲೆಗಳು ಬೆಳಿಗ್ಗೆ 9 ರಿಂದ ಪ್ರಾರಂಭಗೊಳ್ಳುತ್ತದೆ ಎಂದು ಜಿಲ್ಲಾಡಳಿತ ಆದೇಶಿಸಿದೆ
ದಟ್ಟ ಮಂಜಿನಿಂದಾಗಿ ಕಡಿಮೆ ಗೋಚರತೆಯಿಂದಾಗಿ ಹಲವಾರು ಅಪಘಾತಗಳು ವರದಿಯಾಗಿರುವುದರಿಂದ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಗಾಜಿಯಾಬಾದ್ನಲ್ಲಿ ಹೊಸ ಶಾಲಾ ಸಮಯಗಳು (ಡಿಸೆಂಬರ್ 21) ಇಂದಿನಿಂದ ಜಾರಿಗೆ ಬರಲಿವೆ.
ಪಂಜಾಬ್ನಲ್ಲೂ ಶಾಲೆಗಳ ಸಮಯ ಬದಲಾವಣೆ:
ಪಂಜಾಬ್ನಲ್ಲಿಯೂ ದಟ್ಟವಾದ ಮಂಜಿನಿಂದಾಗಿ ಶಾಲೆಗಳ ಸಮಯವನ್ನು ಬದಲಾಯಿಸಲಾಗಿದೆ. ಮಂಜಿನ ಕಾರಣ ಡಿಸೆಂಬರ್ 21 ರಿಂದ ಜನವರಿ 21 ರವರೆಗೆ ರಾಜ್ಯದ ಎಲ್ಲಾ ಶಾಲೆಗಳು ಬೆಳಿಗ್ಗೆ 10 ಗಂಟೆಗೆ ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಮಂಗಳವಾರ ಘೋಷಿಸಿದ್ದಾರೆ. ಶಾಲೆಗಳ ಮುಚ್ಚುವ ಸಮಯ ಹಾಗೆಯೇ ಇರುತ್ತದೆ ಎಂದು ಹೇಳಿದರು. ಪ್ರಸ್ತುತ ಶಾಲೆಗಳು ಬೆಳಿಗ್ಗೆ 9 ಗಂಟೆಗೆ ತೆರೆದು ಮಧ್ಯಾಹ್ನ 3 ಗಂಟೆಗೆ ಮುಚ್ಚುತ್ತವೆ.