ಪಾಟ್ನಾ (ಬಿಹಾರ): 4 ವರ್ಷಗಳ ಹಿಂದೆ ನಿಧನರಾದ ಶಾಸಕರರೊಬ್ಬರಿಗೆ ಪ್ರಧಾನಿ ಮೋದಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಪತ್ರಕೆ ಬಂದಿದ್ದು, ಉತ್ತರ ಬಿಹಾರ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ದಿಗ್ಭ್ರಮೆಗೊಂಡಿದ್ದಾರೆ.

ಆಹ್ವಾನಿತರಾದ ಅಬ್ದುಲ್ ಹೈ ಪಯಾಮಿ ಅವರು 1980 ರ ದಶಕದಲ್ಲಿ ಲೌಕಾಹಾ ಅಸೆಂಬ್ಲಿ ವಿಭಾಗವನ್ನು ಪ್ರತಿನಿಧಿಸಿದ್ದರು. ಅವರು ನಾಲ್ಕು ವರ್ಷಗಳ ಹಿಂದೆ ಕೊನೆಯುಸಿರೆಳೆದಿದ್ದರು. ಆದ್ರೆ, ಇದಘ ಇಲ್ಲದ ವ್ಯಕ್ತಿಗೆ ಮೋದಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಪತ್ರಕೆ ಬಂದಿರುವುದು ಆಶ್ಚರ್ಯಕರ.

ʻಪಯಾಮಿ ಸಾಹೇಬ್ ಹೆಸರಿನಲ್ಲಿ ಆಮಂತ್ರಣ ಪತ್ರಿಕೆ ಬಂದಿದ್ದು ನಾವು ದಿಗ್ಭ್ರಮೆಗೊಂಡಿದ್ದೇವೆ. ಅವರು ಇನ್ನಿಲ್ಲ ಎಂಬುದು ವಿಧಾನಸಭಾ ಅಧಿಕಾರಿಗಳಿಗೆ ತಿಳಿದಿರಬೇಕುʼ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶೀತಲಂಬರ್ ಝಾ ಹೇಳಿದ್ದಾರೆ.

ವಿಧಾನಸೌಧದ ಶತಮಾನೋತ್ಸವದ ಅಂಗವಾಗಿ ನಡೆಯುವ ಸಮಾರಂಭಕ್ಕೆ ಎಲ್ಲ ಹಾಲಿ ಹಾಗೂ ಮಾಜಿ ಶಾಸಕರು ಹಾಗೂ ಎಂಎಲ್‌ಸಿಗಳನ್ನು ಆಹ್ವಾನಿಸಲಾಗಿದೆ. ಆದ್ರೆ, ವಿಶೇಷ ರಕ್ಷಣಾ ಗುಂಪು ಅನುಮೋದಿಸಿದ ಆಹ್ವಾನಿತರ ಪಟ್ಟಿಯಲ್ಲಿ ಮೃತ ವ್ಯಕ್ತಿಯನ್ನು ಸೇರಿಸುವುದು “ಗಂಭೀರ ಲೋಪ” ಎಂದು ವಿಧಾನಸಭಾ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ʻಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ʼನಲ್ಲಿ ಕ್ಲಿಕ್ಕಿಸಿದ ಬ್ರಹ್ಮಾಂಡದ ಅದ್ಭುತ ಚಿತ್ರಗಳನ್ನು ಬಿಡುಗಡೆ ಮಾಡಿದ NASA!

BIGG NEWS : ಇಂದು ಸಿಎಂ ಬೊಮ್ಮಾಯಿ ಭಟ್ಕಳ ಭೇಟಿ ರದ್ದು, ಉಡುಪಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ

Share.
Exit mobile version