ವಾಷಿಂಗ್ಟನ್ (ಯುಎಸ್): ಖಗೋಳಶಾಸ್ತ್ರದ ಹೊಸ ಯುಗಕ್ಕೆ NASA ಸಾಕ್ಷಿಯಾಗಿದೆ. ಜೇಮ್ಸ್​​ ವೆಬ್​ ಟೆಲಿಸ್ಕೋಪ್​​ ಬ್ರಹ್ಮಾಂಡದಲ್ಲಿನ ಅದ್ಬುತ ಚಿತ್ರಗಳನ್ನು ಭೂಮಿಗೆ ರವಾನಿಸಿದೆ. ಇದನ್ನು ಮಂಗಳವಾರ ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್ ಸ್ಕ್ರೀನ್‌ನಲ್ಲಿ ಪ್ರದರ್ಶಿಸಲಾಯಿತು.

ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ನಲ್ಲಿರುವ ಈ ಎರಡು ಕ್ಯಾಮೆರಾಗಳು ದಕ್ಷಿಣ ರಿಂಗ್ ನೆಬ್ಯುಲಾ ಎಂದು ಕರೆಯಲ್ಪಡುವ ಗ್ರಹಗಳ ನೆಬ್ಯುಲಾ NGC 3132 ನ ಇತ್ತೀಚಿನ ಚಿತ್ರವನ್ನು ಸೆರೆಹಿಡಿಯಲಾಗಿದೆ. ಇದು ಭೂಮಿಯಿಂದ ಸರಿಸುಮಾರು 2,500 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ.

ವೆಬ್’ಸ್ ಫಸ್ಟ್ ಡೀಪ್ ಫೀಲ್ಡ್ ಎನ್ನುವುದು ವಿಭಿನ್ನ ತರಂಗಾಂತರಗಳಲ್ಲಿ ತೆಗೆದ ವಿಭಿನ್ನ ಚಿತ್ರಗಳಿಂದ ಮಾಡಲ್ಪಟ್ಟ ಒಂದು ಸಂಯೋಜನೆಯಾಗಿದೆ. ನಿಯರ್ ಇನ್‌ಫ್ರಾರೆಡ್ ಕ್ಯಾಮೆರಾ (NIRCam) ಮೂಲಕ ತೆಗೆದ ಚಿತ್ರಗಳನ್ನು ಬಳಸಿ ಇದನ್ನು ತಯಾರಿಸಲಾಗಿದೆ. ಕ್ಯಾರಿನಾ ನೆಬ್ಯುಲಾ, WASP-96 b (ಸ್ಪೆಕ್ಟ್ರಮ್ ಡೇಟಾ), ಸದರ್ನ್ ರಿಂಗ್ ನೆಬ್ಯುಲಾ ಮತ್ತು ಸ್ಟೀಫನ್ಸ್ ಕ್ವಿಂಟೆಟ್ ಗುರಿಗಳ ಚಿತ್ರಗಳನ್ನು NASA ಬಹಿರಂಗಪಡಿಸಿತು. ಇಲ್ಲಿ ಅನಾವರಣಗೊಂಡ ಮೊದಲ ಚಿತ್ರವು ಗ್ಯಾಲಕ್ಸಿ ಕ್ಲಸ್ಟರ್ SMACS 0723 ಅನ್ನು ತೋರಿಸಿದೆ.

ಕ್ಯಾರಿನಾ ನೆಬ್ಯುಲಾ ಒಂದು ನಾಕ್ಷತ್ರಿಕ ನರ್ಸರಿಯಾಗಿದೆ. ಅಲ್ಲಿ ನಕ್ಷತ್ರಗಳು ಹುಟ್ಟುತ್ತವೆ. ಇದು ಆಕಾಶದಲ್ಲಿರುವ ಅತಿ ದೊಡ್ಡ ಮತ್ತು ಪ್ರಕಾಶಮಾನವಾದ ನೀಹಾರಿಕೆಗಳಲ್ಲಿ ಒಂದಾಗಿದೆ ಮತ್ತು ನಮ್ಮ ಸೂರ್ಯನಿಗಿಂತ ಹೆಚ್ಚು ಬೃಹತ್ತಾದ ಅನೇಕ ನಕ್ಷತ್ರಗಳಿಗೆ ನೆಲೆಯಾಗಿದ್ದು, 7,600 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಎಂದು ವರದಿಯಾಗಿದೆ.

1787 ರಲ್ಲಿ ಮೊದಲು ಪತ್ತೆಯಾದ ಈ ಕಾಂಪ್ಯಾಕ್ಟ್ ಗ್ಯಾಲಕ್ಸಿ ಗುಂಪು ಪೆಗಾಸಸ್ ನಕ್ಷತ್ರಪುಂಜದಲ್ಲಿ 290 ಮಿಲಿಯನ್ ಬೆಳಕಿನ ವರ್ಷಗಳ ದೂರದಲ್ಲಿದೆ. NASA ಬಿಡುಗಡೆ ಮಾಡಿರುವ ಕ್ಯಾರಿನಾ ನೆಬ್ಯುಲಾ, ಸದರ್ನ್ ರಿಂಗ್ ನೆಬ್ಯುಲಾ ಮತ್ತು ಸ್ಟೀಫನ್ಸ್ ಕ್ವಿಂಟೆಟ್ ಎಂಬ 3 ಚಿತ್ರದ ಆವೃತ್ತಿಗಳನ್ನು ನೋಡಲು ಪ್ರಸ್ತುತ ನಾಸದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಈ ಫೋಟೋಗಳು ನೀಲಿ, ಕಿತ್ತಳೆ ಹಾಗೂ ಬಿಳಿಬಣ್ಣದ ಆಕರ್ಷಕವಾದ ನಕ್ಷತ್ರಪುಂಜಗಳನ್ನು ಒಳಗೊಂಡಿದೆ.

ಇವು ಭೂಮಿಯಿಂದ 2,000 ಬೆಳಕಿನ ವರ್ಷಗಳ ದೂರದಲ್ಲಿದೆ. ಈ ದೊಡ್ಡ ಗ್ರಹಗಳ ನೀಹಾರಿಕೆಯು ಸಾಯುತ್ತಿರುವ ನಕ್ಷತ್ರದ ಸುತ್ತಲೂ ವಿಸ್ತರಿಸುವ ಅನಿಲದ ಮೋಡವನ್ನು ಒಳಗೊಂಡಿದೆ.

ಹೊಸ ವೀಕ್ಷಣಾಲಯವು US, ಯುರೋಪಿಯನ್ ಮತ್ತು ಕೆನಡಾದ ಬಾಹ್ಯಾಕಾಶ ಏಜೆನ್ಸಿಗಳ ಜಂಟಿ ಯೋಜನೆಯಾಗಿದೆ. ಅತಿಗೆಂಪಿನಲ್ಲಿ ಆಕಾಶವನ್ನು ನೋಡಲು ಇದನ್ನು ವಿಶೇಷವಾಗಿ ಟ್ಯೂನ್ ಮಾಡಲಾಗಿದೆ.

Video: ನಾಗ್ಪುರದಲ್ಲಿ ಸೇತುವೆ ದಾಟುತ್ತಿದ್ದಾಗ ಹೊಳೆಯಲ್ಲಿ ಕೊಚ್ಚಿ ಹೋದ ಕಾರು: 3 ಮಂದಿ ಸಾವು

Breaking news: ರಾಜೀನಾಮೆಗೂ ಮುನ್ನವೇ ಶ್ರೀಲಂಕಾದಿಂದ ಅಧ್ಯಕ್ಷ ʻಗೊಟಬಯ ರಾಜಪಕ್ಸʼ ಪರಾರಿ

Share.
Exit mobile version