Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿದ್ಯಾರ್ಥಿಗಳೇ ಗಮನಿಸಿ : ದ್ವಿತೀಯ ಪಿಯುಸಿ ಪರೀಕ್ಷೆ-2 ರ ಪರಿಷ್ಕೃತ `ವೇಳಾಪಟ್ಟಿ’ ಪ್ರಕಟ, ಏ.30ರಿಂದ ಮೇ.13ರವರೆಗೆ ಎಕ್ಸಾಂ.!

10/04/2026 5:29 AM

ರಾಜ್ಯದಲ್ಲಿ ಈ ಬಾರಿ `ದ್ವಿತೀಯ ಪಿಯುಸಿ-ಪರೀಕ್ಷೆ-3′ ಇರುವುದಿಲ್ಲ : ಸಚಿವ ಮಧು ಬಂಗಾರಪ್ಪ

10/04/2026 5:20 AM

BIG NEWS : ಶಾಲೆಗಳಲ್ಲಿ ಪಠ್ಯಪುಸ್ತಕಗಳಿಲ್ಲದೆಯೇ `ತೃತೀಯ ಭಾಷೆ’ ಕಲಿಕೆ ಆರಂಭಕ್ಕೆ `CBSE’ ಆದೇಶ!

10/04/2026 5:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಾಸನದಲ್ಲಿ ಸರಣಿ ಹೃದಯಾಘಾತ: ಅಧ್ಯಯನ ನಡೆಸಿ 10 ದಿನಗಳಲ್ಲಿ ವರದಿಗೆ ಸೂಚನೆ- ಸಚಿವ ದಿನೇಶ್ ಗುಂಡೂರಾವ್
KARNATAKA

ಹಾಸನದಲ್ಲಿ ಸರಣಿ ಹೃದಯಾಘಾತ: ಅಧ್ಯಯನ ನಡೆಸಿ 10 ದಿನಗಳಲ್ಲಿ ವರದಿಗೆ ಸೂಚನೆ- ಸಚಿವ ದಿನೇಶ್ ಗುಂಡೂರಾವ್

By kannadanewsnow0901/07/2025 8:57 PM

ಬೆಂಗಳೂರು: ಇತ್ತಿಚೆಗೆ ಹೃದಯಾಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೃದಯಾಘಾತಗಳನ್ನು ಅಧಿಸೂಚಿತ ಕಾಯಿಲೆ ಎಂದು ಪರಿಗಣಿಸುವ ಕುರಿತಂತೆ ಹಾಸನ ಪ್ರಕರಣಗಳ ವರದಿ ಬಂದ ಬಳಿಕ ಚರ್ಚೆ ನಡೆಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.‌

ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ತಜ್ಞರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.‌

ಹಾಸನ ಜಿಲ್ಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ 18 ಹೃದಯಾಘಾತಗಳು ಸಂಭವಿಸಿವೆ. ಈ ಬಗ್ಗೆ ಹಾಸನ ಆರೋಗ್ಯ ಅಧಿಕಾರಿಗಳ ಜೊತೆ ಸಂಪರ್ಕಿಸಿ, ಹೃದಯಾಘಾತಗಳ ಬಗ್ಗೆ ವರದಿ ನೀಡುವಂತೆ ತಜ್ಞರ ಸಮಿತಿಗೆ ತಿಳಿಸಲಾಗಿದೆ. ಜಯದೇವ ಎದೆರೋಗ ಸಂಸ್ಥೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಈಗಾಗಲೇ ಕೋವಿಡ್ ಅಡ್ಡ ಪರಿಣಾಮದಿಂದ ಆಗಿರುವ ಸಾವುಗಳು, ಹೃದಯಾಘಾತಗಳ ಕುರಿತಂತೆ ಸಂಶೋಧನೆ ನಡೆಸಿ ವರದಿ ನೀಡಲು ಸಮಿತಿ ರಚಿಸಲಾಗಿತ್ತು. ಇದೀಗ ಹಾಸನ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ಇದೇ ಸಮಿತಿಗೆ ಜವಾವ್ದಾರಿ ವಹಿಸಲಾಗಿದೆ. 10 ದಿನಗಳ ಒಳಗಾಗಿ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.‌

ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತಗಳು ಹೆಚ್ಚಾಗುತ್ತಿವೆ ಎಂಬುದರ ಬಗ್ಗೆ ಸಂಶೋಧನೆ ನಡೆಯಬೇಕಿದೆ. ರಾಜ್ಯದ ಆರೋಗ್ಯ ಇಲಾಖೆಯಿಂದ ಈ ಮಟ್ಟದ ಸಂಶೋಧನೆ ನಡೆಸುವುದು ಕಷ್ಟ. WHO, ICMR, ನಂತಹ ಸಂಸ್ಥೆಗಳು ಈ ಬಗ್ಗೆ ವಿಸ್ತೃತವಾದ ಸಂಶೋಧನ ನಡೆಸಲು ಶಕ್ತವಾಗಿವೆ. ಸದ್ಯಕ್ಕೆ ಹಾಸನದಲ್ಲಿ ನಡೆದ ಹೃದಯಾಘಾತಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ವರದಿ ನೀಡುವಂತೆ ತಜ್ಞರ ಸಮಿತಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ತಜ್ಞರ ತಂಡದೊಂದಿಗೆ ಚರ್ಚಿಸಿ ಮುಂದೆ ಏನು ಮಾಡಬೇಕು ಎಂಬುದನ್ನ ತೀರ್ಮಾನಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಹೃದಯಾಘಾತಗಳು ಹೆಚ್ಚಾಗಲು, ಬದಲಾದ ಜೀವನಶೈಲ, ಆಹಾರ, ಅಸಾಂಕ್ರಾಮಿಕ ರೋಗಗಳು ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೆ ಹೆಚ್ಚಿನ ಅಂಕಿ ಅಂಶಗಳನ್ನ ಕಲೆ ಹಾಕಿ ಹೆಚ್ಚಿನ ಸಂಶೋಧನೆ ನಡೆಸಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಪ್ರಕರಣಗಳ ಅಂಕಿ ಅಂಶಗಳು ಮಾತ್ರ ಇದೆ. ಖಾಸಗಿ ಆಸ್ಪತ್ರೆಗಳಿಂದಲೂ ನಮಗೆ ಅಂಕಿ ಅಂಶಗಳ ಬೇಕಾಗುತ್ತದೆ. ಹೃದಯಾಘಾತವನ್ನು ಅಧಿಸೂಚಿತ ರೋಗ ಎಂದು ಪರಿಗಣಿಸಿದಾಗ ಮಾತ್ರ ಖಾಸಗಿ ಆಸ್ಪತ್ರೆಗಳಿಂದಲೂ ಅಂಕಿ ಅಂಶಗಳು ದೊರೆಯುತ್ತವೆ. ಆದರೆ ಈ ಬಗ್ಗೆ ಆತುರದಲ್ಲಿ ನಿರ್ಧಾರ ಕೈಗೊಳ್ಳುವುದಿಲ್ಲ. ಹಾಸನದ ಪ್ರಕರಣಗಳ ವಿಚಾರದಲ್ಲಿ ತಜ್ಞರ ತಂಡದ ವರದಿ ಆಧರಿಸಿ ನೋಟಿಫೈ ಮಾಡುವ ಅಗತ್ಯವಿದೆಯಾ ಇಲ್ಲವಾ ಎಂಬುದರ ಬಗ್ಗೆ ಚರ್ಚಿಸುತ್ತೇನೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ಹೇಳಿದರು.

BREAKING: CUET UG 2025 ಅಂತಿಮ ಕೀ ಉತ್ತರಗಳನ್ನು ಬಿಡುಗಡೆ: ಈ ರೀತಿ ಡೌನ್ ಲೋಡ್ ಮಾಡ್ಕೊಳ್ಳಿ | CUET UG 2025

BREAKING : ಕರ್ನಾಟಕ ‘ದ್ವಿತೀಯ PUC’ ಪರೀಕ್ಷೆ-3 ರ ಫಲಿತಾಂಶ ಪ್ರಕಟ : ಶೇ.20.22 ರಷ್ಟು ವಿದ್ಯಾರ್ಥಿಗಳು ಪಾಸ್| II PUC Exam Result 2025

Share. Facebook Twitter LinkedIn WhatsApp Email

Related Posts

ವಿದ್ಯಾರ್ಥಿಗಳೇ ಗಮನಿಸಿ : ದ್ವಿತೀಯ ಪಿಯುಸಿ ಪರೀಕ್ಷೆ-2 ರ ಪರಿಷ್ಕೃತ `ವೇಳಾಪಟ್ಟಿ’ ಪ್ರಕಟ, ಏ.30ರಿಂದ ಮೇ.13ರವರೆಗೆ ಎಕ್ಸಾಂ.!

10/04/2026 5:29 AM2 Mins Read

ರಾಜ್ಯದಲ್ಲಿ ಈ ಬಾರಿ `ದ್ವಿತೀಯ ಪಿಯುಸಿ-ಪರೀಕ್ಷೆ-3′ ಇರುವುದಿಲ್ಲ : ಸಚಿವ ಮಧು ಬಂಗಾರಪ್ಪ

10/04/2026 5:20 AM1 Min Read

BIG NEWS : ಶಾಲೆಗಳಲ್ಲಿ ಪಠ್ಯಪುಸ್ತಕಗಳಿಲ್ಲದೆಯೇ `ತೃತೀಯ ಭಾಷೆ’ ಕಲಿಕೆ ಆರಂಭಕ್ಕೆ `CBSE’ ಆದೇಶ!

10/04/2026 5:19 AM1 Min Read
Recent News

ವಿದ್ಯಾರ್ಥಿಗಳೇ ಗಮನಿಸಿ : ದ್ವಿತೀಯ ಪಿಯುಸಿ ಪರೀಕ್ಷೆ-2 ರ ಪರಿಷ್ಕೃತ `ವೇಳಾಪಟ್ಟಿ’ ಪ್ರಕಟ, ಏ.30ರಿಂದ ಮೇ.13ರವರೆಗೆ ಎಕ್ಸಾಂ.!

10/04/2026 5:29 AM

ರಾಜ್ಯದಲ್ಲಿ ಈ ಬಾರಿ `ದ್ವಿತೀಯ ಪಿಯುಸಿ-ಪರೀಕ್ಷೆ-3′ ಇರುವುದಿಲ್ಲ : ಸಚಿವ ಮಧು ಬಂಗಾರಪ್ಪ

10/04/2026 5:20 AM

BIG NEWS : ಶಾಲೆಗಳಲ್ಲಿ ಪಠ್ಯಪುಸ್ತಕಗಳಿಲ್ಲದೆಯೇ `ತೃತೀಯ ಭಾಷೆ’ ಕಲಿಕೆ ಆರಂಭಕ್ಕೆ `CBSE’ ಆದೇಶ!

10/04/2026 5:19 AM

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಗ್ ಅಪ್‌ ಡೇಟ್: 2027ರಿಂದ ಇರುವುದಿಲ್ಲ ಮುದ್ರಿತ ಅಂಕಪಟ್ಟಿ!

10/04/2026 5:16 AM
State News
KARNATAKA

ವಿದ್ಯಾರ್ಥಿಗಳೇ ಗಮನಿಸಿ : ದ್ವಿತೀಯ ಪಿಯುಸಿ ಪರೀಕ್ಷೆ-2 ರ ಪರಿಷ್ಕೃತ `ವೇಳಾಪಟ್ಟಿ’ ಪ್ರಕಟ, ಏ.30ರಿಂದ ಮೇ.13ರವರೆಗೆ ಎಕ್ಸಾಂ.!

By kannadanewsnow5710/04/2026 5:29 AM KARNATAKA 2 Mins Read

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ರ ದ್ವಿತೀಯ ಪಿಯುಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.…

ರಾಜ್ಯದಲ್ಲಿ ಈ ಬಾರಿ `ದ್ವಿತೀಯ ಪಿಯುಸಿ-ಪರೀಕ್ಷೆ-3′ ಇರುವುದಿಲ್ಲ : ಸಚಿವ ಮಧು ಬಂಗಾರಪ್ಪ

10/04/2026 5:20 AM

BIG NEWS : ಶಾಲೆಗಳಲ್ಲಿ ಪಠ್ಯಪುಸ್ತಕಗಳಿಲ್ಲದೆಯೇ `ತೃತೀಯ ಭಾಷೆ’ ಕಲಿಕೆ ಆರಂಭಕ್ಕೆ `CBSE’ ಆದೇಶ!

10/04/2026 5:19 AM

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಗ್ ಅಪ್‌ ಡೇಟ್: 2027ರಿಂದ ಇರುವುದಿಲ್ಲ ಮುದ್ರಿತ ಅಂಕಪಟ್ಟಿ!

10/04/2026 5:16 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.