ನವದೆಹಲಿ: ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ನನ್ನು 19 ವರ್ಷಗಳ ಜೈಲುವಾಸದ ನಂತರ ಅವರ ವಯಸ್ಸಿನ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ನೇಪಾಳದ ಸುಪ್ರೀಂ ಕೋರ್ಟ್ ಆದೇಶಿಸಿದೆ. ಅಮೆರಿಕದ ಇಬ್ಬರು ಪ್ರವಾಸಿಗರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಚಾರ್ಲ್ಸ್ 2003ರಿಂದ ನೇಪಾಳ ಜೈಲಿನಲ್ಲಿದ್ದಾರೆ.
ಭಾರತ ಮತ್ತು ವಿಯೆಟ್ನಾಂನ ಫ್ರೆಂಚ್ ಪ್ರಜೆ ಶೋಭರಾಜ್, ನೇಪಾಳಕ್ಕೆ ಪ್ರವೇಶಿಸಲು ನಕಲಿ ಪಾಸ್ಪೋರ್ಟ್ ಬಳಸಿ 1975 ರಲ್ಲಿ ಇಬ್ಬರು ಬ್ಯಾಕ್ಪಾಕರ್ಗಳು, 29 ವರ್ಷದ ಯುಎಸ್ ನಾಗರಿಕ ಕೋನಿ ಜೋ ಬೊರೊಂಜಿಚ್ ಮತ್ತು ಅವರ ಗೆಳತಿ ಕೆನಡಾದ ಲಾರೆಂಟ್ ಕ್ಯಾರಿಯೆರ್ (26) ಅವರನ್ನು ಕೊಂದ ಆರೋಪ ಎದುರಿಸುತ್ತಿದ್ದಾನೆ.