ನವದೆಹಲಿ: ಜುಲೈ 22 ರಂದು ತಿಹಾರ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್ ತಮ್ಮ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ತಿಳಿಸಿದ ಬಳಿಕ ಉಪವಾಸವನ್ನು ಕೊನೆಗೊಳಿಸಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ತಿಹಾರ್ ಜೈಲಿನ ಜೈಲು ಸಂಖ್ಯೆ 7ರಲ್ಲಿದ್ದ ಕಾಶ್ಮೀರಿ ಪ್ರತ್ಯೇಕತಾವಾದಿ ತನ್ನ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದರು. ಡಿಜಿ ಸಂದೀಪ್ ಗೋಯೆಲ್ ಅವರ ಮನವಿಯ ಮೇರೆಗೆ ಮಲಿಕ್ ತನ್ನ ಉಪವಾಸ ಸತ್ಯಾಗ್ರಹವನ್ನು ಎರಡು ತಿಂಗಳ ಅವಧಿಗೆ ಮುಂದೂಡಿದ್ದಾರೆ ಎನ್ನಲಾಗುತ್ತಿದೆ.
ಉಪವಾಸ ಇದ್ದ ಪರಿಣಾಮ ಅಸ್ವಸ್ಥಗೊಂಡಿದ್ದ ಮಲಿಕ್ನನ್ನು ಜುಲೈ 26 ರಂದು ಡಾ ರಾಮ್ ಮನೋಹರ್ ಲೋಹಿಯಾ (ಆರ್ಎಂಎಲ್) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜುಲೈ 29 ರಂದು ಮತ್ತೆ ಜೈಲಿಗೆ ಮರಳಿದ್ದರು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
2019 ರಲ್ಲಿ JKLF ಅನ್ನು ನಿಷೇಧಿಸಿದ ಸ್ವಲ್ಪ ಸಮಯದ ನಂತರ ಮಲಿಕ್ ಅವರನ್ನು ಬಂಧಿಸಲಾಯಿತು. ಈ ವರ್ಷ ಮೇ 19 ರಂದು ಎನ್ಐಎ ನ್ಯಾಯಾಲಯವು ಭಯೋತ್ಪಾದಕ ನಿಧಿ ಪ್ರಕರಣಗಳಲ್ಲಿ ದೋಷಿ ಎಂದು ಘೋಷಿಸಿತ್ತು. ಮೇ 25 ರಂದು ಎನ್ಐಎ ನ್ಯಾಯಾಲಯ ಮಲಿಕ್ಗೆ ಜೀವಾವಧಿ ಶಿಕ್ಷೆ ಮತ್ತು10 ಲಕ್ಷ ರೂ. ದಂಡ ವಿಧಿಸಿದೆ,
ಈ ವರ್ಷ ಜುಲೈ 15 ರಂದು, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ಸಹೋದರಿ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಸಯೀದ್, ಡಿಸೆಂಬರ್ 8, 1989 ರಂದು ಜೆಕೆಎಲ್ಎಫ್ ಉಗ್ರಗಾಮಿಗಳು ತನ್ನ ಅಪಹರಣಕ್ಕೆ ಸಂಬಂಧಿಸಿದಂತೆ ಮಲಿಕ್ ಅನ್ನು ಗುರುತಿಸಿದ್ದರು. ರುಬಯ್ಯ ಅವರನ್ನು ಡಿಸೆಂಬರ್ 8, 1989 ರಂದು ಶ್ರೀನಗರದಲ್ಲಿ ಅಪಹರಿಸಲಾಗಿತ್ತು. ಐದು ದಿನಗಳ ನಂತರ ಡಿಸೆಂಬರ್ 13 ರಂದು ಕೇಂದ್ರದಲ್ಲಿ ವಿ ಪಿ ಸಿಂಗ್ ಸರ್ಕಾರವು ಐದು ಭಯೋತ್ಪಾದಕರನ್ನು ವಿನಿಮಯವಾಗಿ ಬಿಡುಗಡೆ ಮಾಡಿದ ನಂತರ ಸೆರೆಯಿಂದ ಬಿಡುಗಡೆ ಮಾಡಲಾಯಿತು.
ಈ ಪ್ರಕರಣದಲ್ಲಿ ಮಲಿಕ್ ಇತರರ ಜೊತೆ ಆರೋಪಿಯಾಗಿದ್ದಾನೆ. ರುಬಯ್ಯ ಸಯೀದ್ ಅಪಹರಣ ಪ್ರಕರಣದ ಹೊರತಾಗಿ, ಜನವರಿ 1990 ರಲ್ಲಿ ಶ್ರೀನಗರದಲ್ಲಿ ನಾಲ್ವರು ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಗಳನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದಲ್ಲೂ ಮಲಿಕ್ ಆರೋಪ ಎದುರಿಸುತ್ತಿದ್ದಾರೆ.