ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ಸಿನ ಹಿರಿಯ ಶಾಸಕರು ಹಾಗೂ ಮಾಜಿ ಸಚಿವರಾದಂತಹ ಹೆಚ್ ವೈ ಮೇಟಿ ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ ವೈ ಮೇಟಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಅವರು ನಿಧನರಾಗಿದ್ದಾರೆ.
ಹೆಚ್ ವೈ ಮೇಟಿ ನಿಧನದ ಸುದ್ದಿ ತಿಳಿದು ತಕ್ಷಣ ಮೈಸೂರು ನಿಂದ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಆಗಮಿಸಿ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ದಿನಗಳ ಹಿಂದೆ ಶಾಸಕ ಮೇಟಿ ಅವರನ್ನು ಭೇಟಿಯಾಗಿದ್ದೆ. ಮೇಟಿ ಗುಣಮುಖರಾಗುತ್ತಾರೆ ಎಂದು ವೈದ್ಯರು ಹೇಳಿದ್ದರು. ಅತ್ಯಂತ ನಿಷ್ಠಾವಂತ ಹಾಗೂ ನನಗೆ ಬಹಳ ಆಪ್ತರಾಗಿದ್ದರು.
ಮೇಟಿ ಬಹಳ ನಿಯತ್ತಾಗಿದ್ದ ಮನುಷ್ಯ ನನಗೆ ಬಹಳ ಲಾಯಲ್ ಆಗಿ ಇದ್ದ ರಾಜಕಾರಣಿ ನಾನು ಭೇಟಿ ಮಾಡಿದ್ದಾಗ ಮೇಟಿ ಚೆನ್ನಾಗಿ ಮಾತನಾಡಿದ್ದ ಎಷ್ಟು ಬೇಗ ಸಾಯುತ್ತಾರೆ. ನನಗಿಂತಲೂ ಅವರು ದೊಡ್ಡವರು. ಎಚ್ ವೈ ಮೇಟಿ ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
		







