ಕೋಲಾರ: ಕಾಂಗ್ರೆಸ್ ಪಕ್ಷದಿಂದ ದೂರ ಉಳಿದಿರುವಂತ ಕೋಲಾರದ ಹಿರಿಯ ಕಾಂಗ್ರೆಸ್ ಮುಖಂಡ ಕೆ ಹೆಚ್ ಮುನಿಯಪ್ಪ ಅವರು, ಕಾಂಗ್ರೆಸ್ ಗೆ ಗುಡ್ ಬೈ ಹೇಳಿ, ಬಿಜೆಪಿ ಸೇರಪಿಲ್ಲಾದ ಎನ್ನಲಾಗಿತ್ತು. ಆ ಬಗ್ಗೆ ಅವರು ಏನ್ ಹೇಳಿದ್ರು ಅಂತ ಮುಂದೆ ಓದಿ..

ಈ ಕುರಿತಂತೆ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಹೆಚ್ ಮುನಿಯಪ್ಪ ( KH Muniyappa ) ಅವರು, ನಾನು ಕಾಂಗ್ರೆಸ್ ಪಕ್ಷದಿಂದ ದೂರುವಿದ್ದ ಮಾತ್ರಕ್ಕೆ ಪಕ್ಷ ಬಿಡುತ್ತಿದ್ದೇನೆ ಎಂಬುದು ಸುಳ್ಳು. ಬಿಜೆಪಿ ಪಕ್ಷವನ್ನು ಸೇರುತ್ತಿಲ್ಲ. ಕೋಲಾರದ ಜನತೆ ನನ್ನನ್ನು 30 ವರ್ಷ ಬೆಳೆಸಿದ್ದಾರೆ ಎಂದರು.

ವರ್ಗಾವಣೆ ನಿರೀಕ್ಷೆಯಲ್ಲಿದ್ದ ‘ಸಾರಿಗೆ ನೌಕರ’ರಿಗೆ ಗುಡ್ ನ್ಯೂಸ್: ‘ಪರಸ್ಪರ ಅಂತರ ನಿಗಮ ವರ್ಗಾವಣೆ’ಗೊಳಿಸಿ KSRTC ಆದೇಶ

ನಾನು ಸೋತ ಕಾರಣಕ್ಕಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ನಾವಿರಬೇಕಾ ಅಥವಾ ಕೆ ಹೆಚ್ ಮುನಿಯಪ್ಪ ಇರಬೇಕಾ ಅಂತ ಹೇಳ್ತಾ ಇದ್ದಾರೆ. ಈ ಮೂಲಕ ಅವರು ಶಕುನಿ ಪಾತ್ರ ಮಾಡ್ತಾ ಇದ್ದಾರೆ. ಅವರಿಗೆ ಮುಂದೆ ಉತ್ತರಿಸೋದಾಗಿ ಹೇಳಿದರು.

ಪಾಂಡವರ ವನವಾಸ ಮುಗಿದಿದೆ. ಯುದ್ಧ ಆರಂಭವಾಗಲಿ ಏಕ ಪಾತ್ರಾಭಿನಯ ಮಾಡುತ್ತಿರುವ ರಮೇಶ್ ಕುಮಾರ್ ಗೆ ಸರಿಯಾಗಿ ಜನರು ಉತ್ತರ ನೀಡಲಿದ್ದಾರೆ. ಅವರ ಮಾತಿಗೆ ಯಾರೂ ಮರುಳಾಗೋದಿಲ್ಲ ಎಂದರು.

ತಾಕತ್ ಇದ್ರೆ ಮುಂದಿನ ಸಿಎಂ ಯಾರು ಎಂದು ಘೋಷಣೆ ಮಾಡಿ – ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸವಾಲ್

Share.
Exit mobile version