ಬೆಂಗಳೂರು: ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಬಿಗ್ ಶಾಕ್ ಅನ್ನು ಕೋರ್ಟ್ ನೀಡಿದೆ. ಅವರನ್ನು ಮೇ.8ರವರೆಗೆ 3 ದಿನಗಳ ಕಾಲ ಎಸ್ಐಟಿ ವಶಕ್ಕೆ ಹೆಚ್ಚಿನ ವಿಚಾರಣೆ ನಡೆಸೋದಕ್ಕೆ ನೀಡಿ, ಕೋರ್ಟ್ ಆದೇಶಿಸಿದೆ.

ಇಂದು ಬೌರಿಂಗ್ ಆಸ್ಪತ್ರೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಆರೋಗ್ಯ ತಪಾಸಣೆ ನಡೆಸಿದ ಬಳಿಕ, ಕೋರಮಂಗಲದಲ್ಲಿರುವಂತ 17ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರ ಮುಂದೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಣ್ಣೀರಿಟ್ಟರು ಎನ್ನಲಾಗುತ್ತಿದೆ.

ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಪ್ರಕರಣದಲ್ಲಿ ಅವರನ್ನು ತಮ್ಮ ವಶಕ್ಕೆ ನೀಡುವಂತೆ ಎಸ್ಐಟಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಮನವಿ ಮಾಡಿದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ಬೆಂಗಳೂರಿನ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರಾದಂತ ರವೀಂದ್ರ ಕುಮಾರ್ ಬಿ ಕಟ್ಟೀಮನಿ ಅವರು, ಮಹಿಳೆ ಅಪರಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಬಿಗ್ ಶಾಕ್ ಎನ್ನುವಂತೆ, ಮೇ.8ರವರೆಗೆ 3 ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ಎಸ್ಐಟಿ ವಶಕ್ಕೆ ನೀಡಿ ಆದೇಶಿಸಿದ್ದಾರೆ.

ಅಪಹರಣ ಪ್ರಕರಣ: ಎಸ್ಐಟಿ ವಿಚಾರಣೆ ವೇಳೆ ಹೆಚ್.ಡಿ ರೇವಣ್ಣ ಹೇಳಿದ್ದೇನು ಗೊತ್ತಾ?

Share.
Exit mobile version