ಉತ್ತರಕನ್ನಡ : ಇದೆ ಮೇ 15 ರಿಂದ 22ವರೆಗೆ ವಾಯು ಭಾರ ಕುಸಿತ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಉತ್ತರ ಕನ್ನಡ ಡಿಸಿ ಇದೀಗ ಮೀನುಗಾರರಿಗೆ ಸೂಚನೆ ನೀಡಿದ್ದಾರೆ.

ಬಂಗಾಳಕೊಲ್ಲಿ ಸಮುದ್ರದಲ್ಲಿ ವಾಯು ಭಾರ ಕುಸಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯಿಂದ ಮೀನುಗಾರರಿಗೆ ಇದೀಗ ಮುನ್ಸೂಚನೆ ನೀಡಲಾಗಿದೆ. ಹಾಗಾಗಿ ಸಮುದ್ರದಲ್ಲಿರುವ ಮೀನುಗಾರರು ದಡ ಸೇರುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾಣಕರ ಆದೇಶ ನೀಡಿದ್ದಾರೆ ಕರಾವಳಿಯಲ್ಲಿ 40 ಕಿ.ಮೀ ನಿಂದ 55 km ವೇಗದಲ್ಲಿ ಗಾಳಿ ಬೀಸಲಿದೆ ಅರಬಿ ಸಮುದ್ರ ಒರಟಾಗಲಿದ್ದು ದುರ್ಘಟನೆ ಸಂಭವಿಸುವ ಸಾಧ್ಯತೆ ಇದೆ ಮೀನುಗಾರಿಕೆಗೆ ಹೋದವರು ತಕ್ಷಣ ದಡ ಸೇರುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Share.
Exit mobile version