ಬೆಂಗಳೂರು: ನಗರದ ಪ್ರಯಾಣಿಕರ ಹಿತದೃಷ್ಠಿಯಿಂದ ಹೊಸ ಮಾರ್ಗದಲ್ಲಿ ಬಿಎಂಟಿಸಿಯಿಂದ ಬಸ್ ಸಂಚಾರ ಆರಂಭಿಸಲಾಗಿದೆ. ಈ ಮೂಲಕ ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಲಾಗಿದೆ.

ಇಂದು ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಟಿಸಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ.

ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣರಹಿತ ಸೇವೆಯಲ್ಲಿ ನೂತನ ಮಾರ್ಗವನ್ನು ದಿನಾಂಕ 01.07.2024 ರಿಂದ ಪರಿಚಯಿಸಿದ್ದು, ವಿವರ ಕೆಳಕಂಡಂತಿದೆ:

ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಮಾರ್ಗ ಬಸ್ಸುಗಳ/ ಸುತ್ತುವಳಿಗಳ ಸಂಖ್ಯೆ
ಚಕ್ರ-1 ನೆಲಮಂಗಲ ನೆಲಮಂಗಲ ಬಸವನಹಳ್ಳಿ, ಬೊಮ್ಮಶೆಟ್ಟಿಹಳ್ಳಿ ಕ್ರಾಸ್‍, ಹುಸ್ಕೂರು ಕ್ರಾಸ್‍, ಹೊನ್ನಸಂದ್ರ ಕ್ರಾಸ್, ನಗರೂರು ಕ್ರಾಸ್‍, ನಂದರಾಮನ ಪಾಳ್ಯ, ಬಿನ್ನಮಂಗಲ. 1 ಬಸ್ಸು

9 ಸುತ್ತುವಳಿಗಳು

 

ಚಕ್ರ-1ಎ ನೆಲಮಂಗಲ ನೆಲಮಂಗಲ ಬಿನ್ನಮಂಗಲ, ನಂದರಾಮನ ಪಾಳ್ಯ, ನಗರೂರು, ನಗರೂರು ಕ್ರಾಸ್‍, ಹೊನ್ನಸಂದ್ರ ಕ್ರಾಸ್, ಹುಸ್ಕೂರು ಕ್ರಾಸ್‍, ಬೊಮ್ಮಶೆಟ್ಟಿಹಳ್ಳಿ ಕ್ರಾಸ್‍, ಬಸವನಹಳ್ಳಿ, 1 ಬಸ್ಸು

9 ಸುತ್ತುವಳಿಗಳು

 

255-ಎಫ್ ಜಾಲಹಳ್ಳಿ ಕ್ರಾಸ್‍ ನೆಲಮಂಗಲ ಮಾರಿಸನ್‍ ಫ್ಯಾಕ್ಟರಿ, ಮಾದನಾಯಕನಹಳ್ಳಿ, ಮಾಕಳಿ, ನಗರೂರು ಕ್ರಾಸ್‍, ನಗರೂರು, ನಂದರಾಮನ ಪಾಳ್ಯ, ಬಿನ್ನಮಂಗಲ. 01  ಬಸ್ಸು

08 ಸುತ್ತುವಳಿಗಳು

ಸದರಿ ಮಾರ್ಗಗಳ ವೇಳಾಪಟ್ಟಿ ವಿವರಗಳನ್ನು ಅನುಬಂಧ-“ಅ” ರಲ್ಲಿ ಅಡಕಗೊಳಿಸಿದೆ.

 ಅನುಬಂಧ-“ಅ

ಮಾರ್ಗ ಸಂಖ್ಯೆ  ಚಕ್ರ-1

ನೆಲಮಂಗಲ ಬಿಡುವ ವೇಳೆ
0730, 0830, 0935, 1105, 1205,  1330, 1430, 1555, 1700.

ಮಾರ್ಗ ಸಂಖ್ಯೆ  ಚಕ್ರ-1ಎ

ನೆಲಮಂಗಲ ಬಿಡುವ ವೇಳೆ
0800, 0900, 1005, 1135, 1235, 1400, 1500, 1630, 1735

ಮಾರ್ಗ ಸಂಖ್ಯೆ 255ಎಫ್‍

ಬಿಡುವ ವೇಳೆ
ಜಾಲಹಳ್ಳಿ ಕ್ರಾಸ್‍ ನೆಲಮಂಗಲ
1010, 1245, 1520, 1740.   0905, 1140, 1415, 1635.

ಯಾವುದೇ ಕಾರಣಕ್ಕೆ ‘ಗ್ಯಾರಂಟಿ’ ಯೋಜನೆಗಳನ್ನು ನಿಲ್ಲಿಸುವುದಿಲ್ಲ : MLC ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ

BREAKING: ದೆಹಲಿ CM ಅರವಿಂದ್ ಕೇಜ್ರಿವಾಲ್‌ಗೆ ಜೈಲೇಗತಿ, ಜಾಮೀನು ಆದೇಶಕ್ಕೆ ದೆಹಲಿ ಹೈಕೋರ್ಟ್‌ ತಡೆ

Share.
Exit mobile version