ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ನೌಕರರ ಪರಸ್ಪರ ಅಂತರ ನಿಗಮ ವರ್ಗಾವಣೆಯ ಬೇಡಿಕೆಯನ್ನು ಈಡೇರಿಸಿತ್ತು. ಇದರಂತೆ ಇದೀಗ ದರ್ಜೆ-3, ದರ್ಜೆ -4ರ ನೌಕರರು ವರ್ಗಾವಣೆಗಾಗಿ ಸಲ್ಲಿಸಿದ್ದಂತ ಅರ್ಜಿಯನ್ನು, ವರ್ಗಾವಣೆಗೊಳಿಸಿ ಆದೇಶಿಸಿದೆ.

BIG NEWS: ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್: ಇನ್ಮುಂದೆ ಸಂಪರ್ಕಕ್ಕೆ ಒಸಿ ಅಗತ್ಯವಿಲ್ಲ

ಈ ಕುರಿತಂತೆ ಕೆ ಎಸ್ ಆರ್ ಟಿ ಸಿಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬಿಎಂಟಿಸಿ, ಕಕರಸಾ ಸಂಸ್ಥೆ ಮತ್ತು ವಾಕರಸಾ ಸಂಸ್ಥೆಗಳ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4ರ ನೌಕರರಿಗೆ ಅಂತರ ನಿಗಮ ವರ್ಗಾವಣೆಗೆ ಕೋರಿಕೆ ಸಲ್ಲಿಸಿದ್ದರು ಎಂದು ತಿಳಿಸಿದ್ದಾರೆ.

ತಾಕತ್ ಇದ್ರೆ ಮುಂದಿನ ಸಿಎಂ ಯಾರು ಎಂದು ಘೋಷಣೆ ಮಾಡಿ – ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸವಾಲ್

ಹೀಗೆ ಸಲ್ಲಿಸಿದ್ದಂತ 862 ನೌಕರರ ಅರ್ಜಿಗಳಲ್ಲಿ 712 ನೌಕರರು ಪರಸ್ಪರ ಕೋರಿಕೆ ಮೇರೆಗೆ ಅಂತರ ನಿಗಮ ವರ್ಗಾವಣೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ವರ್ಗಾವಣೆ ಆದೇಶವನ್ನು ksrtc.karnataka.gov.in ವೆಬ್ ಸೈಟ್ ನಲ್ಲಿಯೂ ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Share.
Exit mobile version