ಮುಂಬೈ: ಇಂದು ಬೆಳಗ್ಗೆ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದು ವಂದೇ ಭಾರತ್ ರೈಲಿನ ಮುಂಭಾಗವು ಹಾನಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೆಮಿ ಹೈಸ್ಪೀಡ್ ರೈಲಿಗೆ ಚಾಲನೆ ನೀಡಿದ ಕೆಲವೇ ದಿನಗಳಲ್ಲಿ ಗುಜರಾತ್ ಈ ಘಟನೆ ನಡೆದಿದೆ.
ರೈಲು ಮುಂಬೈನಿಂದ ಗಾಂಧಿನಗರಕ್ಕೆ ತೆರಳುತ್ತಿತ್ತು. ಅಹಮದಾಬಾದ್ನ ಮುಂದೆ ಬಟ್ವಾ ಮತ್ತು ಮಣಿನಗರ ನಡುವೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.
Vande Bharat Express running b/w Mumbai Central to Gurajat's Gandhinagar met with an accident after a herd of buffaloes came on the railway line at around 11.15am b/w Vatva station to Maninagar. The accident damaged the front part of the engine: Western Railway Sr PRO, JK Jayant pic.twitter.com/OLOMgEv10G
— ANI (@ANI) October 6, 2022
ಅಪಘಾತದಲ್ಲಿ ರೈಲಿನ ಮುಂಭಾಗಕ್ಕೆ ಸಣ್ಣಪುಟ್ಟ ಹಾನಿಯಾಗಿದ್ದು, ಹಳಿಗಳನ್ನು ತೆರವುಗೊಳಿಸಿದ ನಂತರ ರೈಲು ತನ್ನ ಪ್ರಯಾಣವನ್ನು ಮುಂದುವರೆಸಿತು.
ಪ್ರಧಾನಿ ಮೋದಿ ಅವರು ಕಳೆದ ತಿಂಗಳು ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್ ಸೆಮಿ ಹೈಸ್ಪೀಡ್ ರೈಲಿಗೆ ಚಾಲನೆ ನೀಡಿದ್ದರು. ಗಾಂಧಿನಗರದಿಂದ ಅಹಮದಾಬಾದ್ನ ಕಲುಪುರ್ ರೈಲು ನಿಲ್ದಾಣದವರೆಗೆ ಪ್ರಯಾಣಿಸಿದರು.