ಬೆಂಗಳೂರು ನಗರ ಜಿಲ್ಲೆ: ತೋಟಗಾರಿಕೆ ಇಲಾಖೆಯ ಜೈವಿಕ ಕೇಂದ್ರ, ಹುಳಿಮಾವು, ಬೆಂಗಳೂರು ಇಲ್ಲಿ ಜನವರಿ 04 ರಂದು “ಅಣಬೆ ಬೇಸಾಯ” (Production Technology of Mushroom) ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ನಗರವಾಸಿಗಳಿಗೆ, ರೈತರಿಗೆ, ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ.
ತರಬೇತಿಯಲ್ಲಿ ಭಾಗವಹಿಸಲು ಇಚ್ಛಿಸುವವರು ರೂ. 250/- ಗಳನ್ನು ಜೈವಿಕ ಕೇಂದ್ರ, ಹುಳಿಮಾವು, ಬೆಂಗಳೂರು ರವರ ಕಚೇರಿಯಲ್ಲಿ ತರಬೇತಿಯ ದಿನದಂದು ಪಾವತಿಸಿ ನೊಂದಣಿಯನ್ನು ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9449833153, 9066764248, 7892618755 ಅಥವಾ ಇ-ಮೇಲ್ sadh.co23@gmail.com, jaivikakendra.hulimavu@gmail.com ಮೂಲಕ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಹ್ಯಾಕಾಶದಿಂದ ಸ್ಮಾರ್ಟ್ ಫೋನ್ ಮೂಲಕ ‘ಧ್ವನಿ ಕರೆ’ ಸಕ್ರಿಯಕ್ಕೆ ಇಸ್ರೋದಿಂದ ‘ಯುಎಸ್ ಉಪಗ್ರಹ’ ಉಡಾವಣೆ
BREAKING : ಬೆಂಗಳೂರು ಜನತೆಗೆ ಬಿಗ್ ಶಾಕ್ : ನೀರಿನ ದರ ಏರಿಕೆ ಬಹುತೇಕ ಫಿಕ್ಸ್ : ಜ.2ನೇ ವಾರ ದರ ಏರಿಕೆ ಸಾಧ್ಯತೆ!