ಬೆಂಗಳೂರು : ನಿನ್ನೆ ರಾಜ್ಯಾದ್ಯಂತ ಸುದೀಪ್ ನಟನೆಯ ಮಾರ್ಕ್ ಹಾಗೂ ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ ಬಿ ಶೆಟ್ಟಿ ನಟನೆಯ 45 ಚಲನಚಿತ್ರ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಸುದೀಪ್ ನಟನೆಯ ಮಾರ್ಕ್ ಸಿನಿಮಾ ಇದೀಗ ಅಬ್ಬರಿಸುತ್ತಿದ್ದು, ಮೊದಲ ದಿನವೇ 15 ಕೋಟಿ 90 ಲಕ್ಷ ಗಳಿಸಿದೆ. ಫಸ್ಟ್ ಡೇ ಕಲೆಕ್ಷನ್ ನಲ್ಲಿ ಮಾರ್ಕ್ ಚಲನಚಿತ್ರ ಧೂಳೆಬ್ಬಿಸಿದೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ನಟ ಕಿಚ್ಚ ಸುದೀಪ್ ಟ್ವೀಟ್ ನಲ್ಲಿ ಸಂತೋಷ ಹಂಚಿಕೊಂಡಿದ್ದಾರೆ. ನಿಮ್ಮ ಬೆಂಬಲವನ್ನು ಕಂಡು ನನಗೆ ಮಾತನಾಡಲು ಪದಗಳೇ ಸಿಗುತ್ತಿಲ್ಲ ಎಂದಿದ್ದಾರೆ. ಮಾರ್ಕ್ ಚಿತ್ರಕ್ಕೆ ಎಲ್ಲೆಡೆಯಿಂದ ಸಿಗುತ್ತಿರುವ ಪ್ರೀತಿ ಮತ್ತು ಮೆಚ್ಚುಗೆ ಕಂಡು ನಾನು ಧನ್ಯನಾಗಿದ್ದೇನೆ. ಇದು ನಿಜಕ್ಕೂ ಅದ್ಭುತ. ಅಭಿಮಾನಿಗಳು ಚಿತ್ರವನ್ನು ಮೆಚ್ಚಿಕೊಳ್ಳುತ್ತಿರುವುದು, ಚಿತ್ರಮಂದಿರಗಳಲ್ಲಿ ಕುಣಿಯುತ್ತಾ, ಸಂಭ್ರಮಿಸುತ್ತಾ, ಕಿರುಚುತ್ತಾ ಚಿಯರ್ ಮಾಡುತ್ತಿರುವ ಅನೇಕ ಪೋಸ್ಟ್‌ಗಳನ್ನು ನಾನು ನೋಡಿದೆ. ಸಿನಿಮಾ ಮೇಲೆ ನೀವು ತೋರಿಸುತ್ತಿರುವ ಈ ಮಟ್ಟದ ಕ್ರೇಜ್ ಮತ್ತು ಬೆಂಬಲವನ್ನು ಕಂಡು ನನಗೆ ಮಾತನಾಡಲು ಪದಗಳೇ ಸಿಗುತ್ತಿಲ್ಲ” ಎಂದು ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ.
ನಮ್ಮ ಸಿನಿಮಾ ಮೇಲೆ ಇಷ್ಟೊಂದು ಪ್ರೀತಿ ತೋರಿದ ಪ್ರತಿಯೊಬ್ಬರಿಗೂ ಮತ್ತು ಮಾಧ್ಯಮ ಮಿತ್ರರಿಗೆ ನನ್ನದೊಂದು ದೊಡ್ಡ ಅಪ್ಪುಗೆ. ಮಾರ್ಕ್ ಚಿತ್ರವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಯೋಜಿಸಿ, ಕಾರ್ಯರೂಪಕ್ಕೆ ತರಲಾಗಿತ್ತು. ನಮ್ಮ ಇಡೀ ತಂಡ ಹಗಲಿರುಳು ಶ್ರಮವಹಿಸಿ ಕೆಲಸ ಮಾಡಿದೆ. ನಿಮ್ಮ ಈ ಪ್ರೀತಿಯೇ ನಮ್ಮ ತಂಡಕ್ಕೆ ಸಿಕ್ಕ ಅತಿದೊಡ್ಡ ಪ್ರಶಸ್ತಿ ಮತ್ತು ಪ್ರತಿಫಲ. ಇದು ನಮಗೆ ಇನ್ನೂ ಹೆಚ್ಚಿನ ಮತ್ತು ಉತ್ತಮವಾದ ಸಿನಿಮಾಗಳನ್ನು ನೀಡಲು ಸ್ಫೂರ್ತಿ ನೀಡುತ್ತದೆ” ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
Overwhelmed with the love and appreciation #MarkTheFilm has recieved all across. It's phenomenal. 🙏🏼
Came across soo many posts ,, appreciating,, dancing,, celebrating,, cheering , screaming 🔥⭐️.
I run short of words when i see this kinda craze n support tats been showered upon… pic.twitter.com/YuN97xlKGx— Kichcha Sudeepa (@KicchaSudeep) December 26, 2025








